Latest

ಮಂಗಳೂರು ಬಾಂಬ್ ಸ್ಫೋಟ; ಶಂಕಿತರ ಮನೆ ಮೇಲೆ ಪೊಲೀಸರ ದಾಳಿ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶಂಕಿತ ಶಾರಿಕ್ ಹಾಗೂ ಮಾಜ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳೂರಿನ ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಶಾರಿಕ್, ಮಾಜ್ ನಿವಾಸದ ಮೇಲೆ ಸರ್ಚ್ ವಾರಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಟಾಕೀಸ್ ರಸ್ತೆಯಲ್ಲಿರುವ 4 ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Home add -Advt

ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಅಶ್ವತ್ಥ ಗೌಡ, ಮಾಳೂರು ಸಿಪಿಐ ಪ್ರವೀಣ್, ಆಗುಂಬೆ ಪಿಎಸ್ ಐ ಶಿವಕುಮಾರ್, ಮಾಳೂರು ಪಿಎಸ್ ಐ ನೇತೃತ್ವದಲ್ಲಿ ದಾಳಿ ನಡೆದಿದೆ.

ಕಟ್ಟುಪಾಡಿನ ಕವಚ ಕಳಚಿ ಬಂದು ಮೆರೆದ ಭರತನಾಟ್ಯ ಕ್ಷೇತ್ರದ ಮಹಾನ್ ತಾರೆ

https://pragati.taskdun.com/special-article-on-indian-theosophist-dancer-and-choreographer-rukminidevi-arundel/

Related Articles

Back to top button