Latest

ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕೊರೊನಾ ಸೋಂಕಿನಿಂದ ಭಯಗೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ  ತಿರುವು ಪಡೆದುಕೊಂಡಿದೆ. ದಂಪತಿಗೆ ಕೊರೊನಾ ಸೋಂಕು ಇರಲಿಲ್ಲ ಎಂಬ ಸಂಗತಿ ಬಯಲಾಗಿದೆ.

ಮಂಗಳೂರು ನಗರದ ಹೊರವಲಯದ ಚಿತ್ರಾಪುರದಲ್ಲಿ ಅಪಾರ್ಟ್ ಮೆಂಟ್ ಒಂದರಲ್ಲಿ ರಮೇಶ್ ಹಾಗೂ ಗುಣ ಎಂಬ ದಂಪತಿ ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ, ದಂಪತಿಗಳಲ್ಲಿ ಕೊರೊನಾ ಸೋಂಕು ಇರಲಿಲ್ಲ. ಡೆತ್ ನೋಟ್ ನಲ್ಲಿ ನಮಗೆ ಕೋವಿಡ್ ಇದೆ. ಬ್ಲ್ಯಾಕ್ ಫಂಗಸ್ ಬಂದರೂ ಬರಬಹುದು ಎಂದೆಲ್ಲ ಬರೆದಿದ್ದಾರೆ. ಇಬ್ಬರೂ ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಂತಿದೆ.

Home add -Advt

ದಂಪತಿ ಎರಡು ಸಲ ಮಗು ಪಡೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಈ ಖಿನ್ನತೆ ಕೂಡ ಅವರನ್ನು ಕಾಡುತ್ತಿರಬಹುದು. ಆದರೆ ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿದ್ದ ಬಗ್ಗೆಯೂ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ಗೆ ಹೆದರಿ ದಂಪತಿ ಆತ್ಮಹತ್ಯೆ; ಸಾವಿಗೂ ಮುನ್ನ ವಾಯ್ಸ್ ಮೆಸೆಜ್

Related Articles

Back to top button