Latest

ಕೋವಿಡ್ ಗೆ ಹೆದರಿ ದಂಪತಿ ಆತ್ಮಹತ್ಯೆ; ಸಾವಿಗೂ ಮುನ್ನ ವಾಯ್ಸ್ ಮೆಸೇಜ್

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರು ನಗರ ಹೊರವಲಯದ ಚಿತ್ರಾಪುರ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ರೆಹಜಾ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ರಮೇಶ್ ಹಾಗೂ ಗುಣ ಮೃತ ದಂಪತಿಗಳು.

ಕಳೆದ ಒಂದು ವಾರದಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದ ದಂಪತಿ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದಂಪತಿ ಆತ್ಮಹತ್ಯೆಗೂ ಮುನ್ನ ಸ್ನೇಹಿತರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ತಮ್ಮ ಅಂತ್ಯಕ್ರಿಯೆಗಾಗಿ 1 ಲಕ್ಷ ಹಣ ಇಟ್ಟಿರುವುದಾಗಿ ಹಾಗೂ ಮನೆಯಲ್ಲಿರುವ ವಸ್ತು, ಉಪಕರಣಗಳನ್ನು ಮಾರಾಟ ಮಾಡಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ವಾಯ್ಸ್ ಮೆಸೆಜ್ ಆಧರಿಸಿ ಮಂಗಳೂರು ಪೊಲೀಸ್ ಆಯುಕ್ತರು ಪೊಲೀಸರಿಗೆ ಅಡ್ರೆಸ್ ಪತ್ತೆ ಮಾಡಲು ಸೂಚಿಸಿದ್ದಾರೆ. ಅಡ್ರೆಸ್ ಟ್ರಾಕ್ ಮಾಡಿ ಪೊಲೀಸರು ಮನೆ ತಲುಪುವಷ್ಟರಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಂದು ರಸ್ತೆಯಲ್ಲಿ 5 ಜನ ಸಿಎಂಗಳಾಗಿದ್ದಾರೆ; ಅದರಲ್ಲಿ ನಾನೂ ಒಬ್ಬ ಎಂದ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button