ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಣಿಪುರ ರಾಜ್ಯದ ಬಾಲಕಿಯು ಕಳೆದ ಡಿಸೆಂಬರನಲ್ಲಿ ತನ್ನ ತಾಯಿಗೆ ತಿಳಿಸಿ ಕೆಲಸಕ್ಕೆ ಹೋಗುತ್ತೆನೆಂದು ಹೈದರಾಬಾದಗೆ ಬಂದು ಅಲ್ಲಿ ಕೆಲಸ ಪ್ರಾರಂಭಿಸುತ್ತಾರೆ. ಅಲ್ಲಿ ಸರಿಯಾಗಿ ಸಂಬಳ ಸಿಗದೆ ಇರುವ ಕಾರಣದಿಂದ ಕೇರಳಾದ ಕೋಚ್ಚಿನ್ ನಗರದ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೋಳುತ್ತಾಳೆ. ಅಲ್ಲಿಯು ಕೂಡಾ ಸರಿಯಾಗಿ ಸಂಬಳ ಸಿಗದೇ ಇರುವುದರಿಂದ ಕಳೆದ ಮಾರ್ಚ್ ೧೮ ರಂದು ಬೆಳಗಾವಿ ನಗರದ ದೇಶಿ ಧಾಬಾದಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ.
ಜೊತೆಯಲ್ಲಿ ಒರ್ವ ಮಹಿಳಾ ತೃತೀಯ ಲಿಂಗಿ ಮಹಿಳೆಯು ಸಹ ಜೊತೆಯಲ್ಲಿ ಇದ್ದು, ಸುಮಾರು ದಿನಗಳು ಕುಟುಂಬದ ಸಂಪರ್ಕಕ್ಕೆ ಬಾರದೇ ಇರುವುದರಿಂದ ತಾಯಿಯು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಅದರಂತೆ ಪಾಲಕರ ದೂರಿನ್ವಯ ಮಣಿಪುರ ಸರ್ಕಾರದ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ (ಮಕ್ಕಳ ರಕ್ಷಣೆ) ರವರು ೭ ಜನ ಅಧಿಕಾರಿಗಳ ಒಂದು ತಂಡ ರಚಿಸಿ ಬಾಲಕಿ ರಕ್ಷಣೆ ಮಾಡಲು ತಿಳಿಸಿರುತ್ತಾರೆ.
ಅದರಂದೆ ಜಾಡು ಹಿಡಿದ ತಂಡವು ಹೈದ್ರಬಾದ್, ಬೆಂಗಳೂರು ಮೂಲಕ ಬೆಳಗಾವಿಗೆ ಬೇಟಿ ನೀಡಿ, ಮೇ.೩ ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ, ಪೋಲಿಸ್ ಇಲಾಖೆ ಸಹಕಾರದೊಂದಿಗೆ ಬಾಲಕಿಯನ್ನು ತಿಲಕವಾಡಿ ಪೋಲಿಸ್ ಠಾಣೆ ವ್ಯಾಪ್ತಿಂiiಲ್ಲಿ ರಕ್ಷಣೆ ಮಾಡಲಾಗಿರುತ್ತದೆ. ತಿಲಕವಾಡಿ ಪೋಲಿಸ್ ಠಾಣೆಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಬಾಲಕಿಯ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು, ಬಾಲಕಿಯನ್ನು ತಿಲಕವಾಡಿ ಪೋಲಿಸ್ ಠಾಣೆಯಲ್ಲಿ ವಿಚಾರಿಸಿ, ಆಪ್ತಸಮಾಲೋಚನೆ ಒದಗಿಸಲಾಯಿತು.
ಪೋಲಿಸ್‌ರ ಬೆಂಗಾವಲಿನೊಂದಿಗೆ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ನಂತರದಲ್ಲಿ ಮಕ್ಕಳ ಕಲ್ಯಾಣ ಸಮಿತಿಯವರು ಮಗು ತಾನು ಮನೆಗೆ ಹೊಗುವ ಇಚ್ಛಾಸಕ್ತಿ ವ್ಯಕ್ತಪಡಿಸಿದ ಕಾರಣ ಬಾಲಕಿಯ ಹಿತದೃಷ್ಠಿಯಿಂದ ಬಾಲಕಿಯನ್ನು ರಕ್ಷಣಾ ತಂಡದ ಮುಖ್ಯಸ್ಥರಾದ ಕೆ.ಸರೋಜಾ ರವರಿಗೆ ಬಾಲಕಿಯನ್ನು ಬಿಡುಗಡೆಗೊಳಿಸಿದರು.
ಬೆಳಗಾವಿ ನಗರ ಪೋಲಿಸ್ ಆಯುಕ್ತರು ಯಡಾ ಮಾರ್ಟಿನ್ ಮಾರ್ಬನ್ಯಾಂಗ ರವರಿಗೆ ಬೇಟಿ ನೀಡಿ, ಚರ್ಚಿಸಲಾಯಿತು. ಬೆಳಗಾವಿ ಜಿಲ್ಲೆಯಲ್ಲಿ ಹೊರ ರಾಜ್ಯದ ಯಾವುದೇ ಪುರುಷರು ಹಾಗೂ ಮಹಿಳೆಯರು, ತೃತಿಯ ಲಿಂಗದವರು ಕೆಲಸಕ್ಕೆ ಬಂದರೆ ಮೂದಲು ಅವರ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಕೆಲಸಕ್ಕೆ ಇಟ್ಟಕೊಳ್ಳಬೇಕು. ಅದರಲ್ಲ್ಲಿ ೧೮ ವರ್ಷದೊಳಗಿನ ಯಾವುದೇ ಮಗು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ಸಂಬಂಧಿಸಿದ ಪೋಲಿಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಆಯುಕ್ತರು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ರವರು ತಿಳಿಸಿದರು.
ಸದರಿ ಬಾಲಕಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಕೆ. ಸರೋಜಾ ಉಪ ನಿರ್ದೇಶಕರು ಮಕ್ಕಳ ರಕ್ಷಣೆ ಮಣಿಪುರ ಸರ್ಕಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಹಾಂತೇಶ ಭಜಂತ್ರಿ, ಕ್ಯಾಂಪ್ ಪೋಲಿಸ್ ಠಾಣೆಯ ಪಿ.ಎಸ್.ಐ ರುಕ್ಮೀಣಿ ಹಾಗೂ ಸಿಬ್ಬಂದಿಯವರು ಹಾಜರಿದ್ದರು. ಸ್ನೇಹಾ ಪಿ. ವಿ. ಬೆಳಗಾವಿ ನಗರ ಉಪ ಪೋಲಿಸ್ ಆಯುಕ್ತರು ಅಗತ್ಯ ಸಹಕಾರ ಒದಗಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ