Politics

*BREAKING NEWS: ದೇವೇಗೌಡರ ಮನೆಯಲ್ಲೆ ಎಸ್ಐಟಿಗೆ ಸಿಕ್ಕಿಬಿದ್ದ ರೇವಣ್ಣ!*

ಪ್ರಗತಿವಾಹಿನಿ ಸುದ್ದಿ: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

Home add -Advt

ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ರೇವಣ್ಣ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿ ಇದ್ದಾರೆ ಎಂಬ ಮಾಹಿತಿ ಪಡೆದ ಎಸ್ ಐಟಿ ಅಧಿಕಾರಿಗಳ ತಂಡ, ದೇವೇಗೌಡರ ಬೆಂಗಳೂರಿನ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿ, ರೇವಣ್ಣರಿಗಾಗಿ ಶೋಧ ನಡೆಸಿತು. ಈ ವೇಳೆ ದೇವೇಗೌಡರ ನಿವಾಸಲ್ಲಿಯೇ ರೇವಣ್ಣ ಸಿಕ್ಕಿಬಿದ್ದಾರೆ.

ರೇವಣ್ಣ ಅವರನ್ನು ವಶಕ್ಕೆ ಪಡೆದ ಎಸ್ ಐಟಿ ಅಧಿಕಾರಿಗಳು ಕಿಡ್ನ್ಯಾಪ್ ಕೇಸ್ ನಲ್ಲಿ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

Related Articles

Back to top button