Latest

*ಎರಡು ಬಾರಿ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ನೀಚ ಪತಿ*

ಪ್ರಗತಿವಾಹಿನಿ ಸುದ್ದಿ; ಲಕ್ನೌ: ಪತ್ನಿ ಒಂದೇ ರಾತ್ರಿ ಎರಡು ಬಾರಿ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಆಕೆಯನ್ನೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ಒಂದೇ ರಾತ್ರಿಯಲ್ಲಿ ಎರಡನೇ ಬಾರಿ ಸಂಭೋಗಕ್ಕೆ ಪತ್ನಿ ಒಪ್ಪದ ಕಾರಣಕ್ಕೆ ಸ್ವಾರ್ಥಿ ಪತಿಯೊಬ್ಬ ನೀಚತನ ಮೆರೆದಿದ್ದು, ಪತ್ನಿ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಮೃತದೇಹವನ್ನು ಮನೆಯಿಂದ 50 ಕೀ.ಮೀ ದೂರದಲ್ಲಿ ಎಸೆದು ಪರಾರಿಯಾಗಿದ್ದಾನೆ.

ಮಹಿಳೆಯ ಶವವನ್ನು ಕಂಡ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿ ಪತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 34 ವರ್ಷದ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ.

ವಿಚಾರಣೆಯ ವೇಳೆ ತಾನೇ ಪತ್ನಿಯನ್ನು ಹತ್ಯೆಗೈದಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಮ್ರೋಹಾದಲ್ಲಿ ಬೇಕರಿ ನಡೆಸುತ್ತಿದ್ದ ಅನ್ವರ್ ಗೆ ಮೂವರು ಮಕ್ಕಳಿದ್ದಾರೆ. ಕ್ಷಣಿಕ ಸುಖಕ್ಕಾಗಿ ಮನುಷತ್ವವನ್ನೂ ಮರೆತು ಪತ್ನಿಯನ್ನೇ ಕೊಲೆಗೈದಿದ್ದಾನೆ.

Home add -Advt

*ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ: ಸಾರ್ವಜನಿಕರ ಗಮನಕ್ಕೆ*

https://pragati.taskdun.com/belagavipower-transmission-line-constructionpublic-notice/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button