Latest

ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಹೆಣ್ಣುಮಕ್ಕಳು ಎಷ್ಟೇ ಸಾಧನೆ ಮಾಡಿದರೂ, ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಹೆಣ್ಣುಮಕ್ಕಳೆಂದರೆ ತಾತ್ಸಾರ ಭಾವನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಇಂತದ್ದೊಂದು ವಿಚಿತ್ರಘಟನೆಯೊಂದು ನಡೆದಿದೆ. ಮತ್ತೆ ಹೆಣ್ಣು ಮಗು ಹುಟ್ಟಿತು ಎಂದು ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ಶ್ರೀನಿವಾಸಪುರದ ಶೆಟ್ಟಿಹಳ್ಳಿಯಲ್ಲಿ ಲೋಕೇಶ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲೋಕೇಶ್ ಗೆ ಮೂವರು ಹೆಣ್ಣುಮಕ್ಕಳಿದ್ದು, ಈಗ ನಾಲ್ಕನೆಯದೂ ಹೆಣ್ಣುಮಗು ಜನಿಸಿದೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶೆಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆ ಎದುರು ಕಾರ್ಪೋರೇಟರ್ ಪ್ರತಿಭಟನೆ

Home add -Advt

https://pragati.taskdun.com/local/corporator-stage-protest-in-front-of-city-municipal-corporation/

Related Articles

Back to top button