Kannada NewsKarnataka NewsLatest

ತಿನಿಸುಕಟ್ಟೆಯಲ್ಲಿ ವಿವಿಧ ತಿನಿಸು ಸವಿದ ಹಲವು ಸಚಿವರು, ಶಾಸಕರು

  ಹುಬ್ಬಳ್ಳಿ-ಧಾರವಾಡದಲ್ಲಿ ಇದೆರೀತಿ ತಿನಸು ಕಟ್ಟೆ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸ್ಮಾರ್ಟ್ ಸಿಟಿವತಿಯಿಂದ ನಿರ್ಮಿಸಲಾಗಿರುವ ತಿನಿಸುವ ಕಟ್ಟೆ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಸಂಜೆಯ ವೇಳೆಯಲ್ಲಿ ಅಲ್ಲಿನ ಜನಜಂಗುಳಿ ಎಂತವರೂ ಆಶ್ಚರ್ಯಪಡುವಂತಿರುತ್ತದೆ.

ಇಂದು ಕೇಂದ್ರ ಸಚಿವ  ಪ್ರಲ್ಹಾದ ಜೋಶಿ ಸೇರಿದಂತೆ ಗಣ್ಯರು ತಿನಸು ಕಟ್ಟೆಗೆ ಬೆಟ್ಟಿ ಕೊಟ್ಟು, ತಿನಿಸು ಕಟ್ಟೆಯಲ್ಲಿರುವ ತಿನಿಸುಗಳ ಸ್ವಾಧವನ್ನು ಪಡೆದುಕೊಂಡರು.

Home add -Advt

ಕರ್ನಾಟಕ ವಿಧಾನಸಭೆ  ಉಪ ಸಭಾಪತಿ ಆನಂದ  ಮಾಮನಿ,  ಸಚಿವರಾದ ಜಗದೀಶ್ ಶೆಟ್ಟರ್,  ಉಮೇಶ ಕತ್ತಿ,  ಶಾಸಕರುಗಳಾದ  ಅನಿಲ ಬೆನಕೆ ಹಾಗೂ  ಮಹಾದೇವಪ್ಪ ಯಾದವಾಡ ಸಹ ತಿಂಡಿಗಳನ್ನು ಸವಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ಇದೆರೀತಿ ತಿನಸು ಕಟ್ಟೆ ನಿರ್ಮಾಣ ಮಡುವುದಾಗಿ ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ತಿಳಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ, ಈ ಯೋಜನೆಯ ರೂವಾರಿ  ಅಭಯ ಪಾಟೀಲ ಉಪಸ್ಥಿತರಿದ್ದರು.

ಬೆಳಗಾವಿಯಲ್ಲೊಂದು ಮಹಿಳಾ ಬಜಾರ್; ಭಾನುವಾರ ಲೋಕಾರ್ಪಣೆ

Related Articles

Back to top button