
ಯುವತಿ ನಾಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ತಾಲೂಕಿನ ಗೋಜಗಾ ಗ್ರಾಮದ ಮಹಿಳೆ ಪ್ರಿಯಾ ವಿನಾಯಕ ನಾಯಕ (೨೩) ಕಾಣೆಯಾಗಿದ್ದಾರೆ.
ಇವರು ಜೂ. ೫, ೨೦೨೩ ರಂದು ಬೆಳಗ್ಗೆ ೫ ೩೦ ಕ್ಕೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದಾಳೆ ಎಂದು ಇವರ ಪತಿ ವಿನಾಯಕ ನಾಯಕ ಅವರು ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ
ಈ ಯುವತಿಯು ಉದ್ದ ಮುಖ, ಉದ್ದ ಮೂಗು, ಗೋದಿ ಮೈ ಬಣ್ಣ, ಸದೃಡ ಮೈಕಟ್ಟು ಹೋದಿರುತ್ತಾರೆ ಹಾಗೂ ಹಳದಿ ಗ್ರೀನ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ೫ ಅಡಿ ೨ ಇಂಚು ಎತ್ತರವಿರುತ್ತಾರೆ ಮರಾಠಿ, ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ.
ಯುವತಿಯ ಮಾಹಿತಿ ಸಿಕ್ಕಲ್ಲಿ ಕಾಕತಿ ಪೊಲೀಸ್ ಠಾಣೆ ಅಥವಾ ಪೊಲೀಸ ನಿಯಂತ್ರಣ ಕೊಠಡಿಗೆ ತಿಳಿಸಬಹುದು ಹಾಗೂ ಕಾಕತಿ ಪೊಲೀಸ ಠಾಣೆ ಟೆಲಿಪೋನ್ ನಂ. ೦೮೩೧-೨೪೦೫೨೦೩, ಪಿ.ಐ ೯೪೮೦೮೦೪೧೧೫ ಪಿ.ಎಸ್.ಐ ೯೪೮೦೮೦೪೦೮೩ ನಂ. ಗಳಿಗೆ ಸಂಪರ್ಕಿಸಬಹುದು ಎಂದು ಕಾಕತಿ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವ್ಯಕ್ತಿ ನಾಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಗಣೇಶಪೂರ ಗಂಗಾ ನಗರದ ವ್ಯಕ್ತಿ ಕೆಂಚಪ್ಪಾ ಭೀಮಪ್ಪಾ ಹೆಗಡೆ (೩೪) ಕಾಣೆಯಾಗಿದ್ದಾರೆ.
ಇವರು ಮೆ.೦೫ ರಂದು ಮಧ್ಯಾಹ್ನ ೧೨ ಗಂಟೆಗೆ ಮನೆಯಿಂದ ರಾಮದುರ್ಗಕ್ಕೆ ವೆಲ್ಡಿಂಗ್ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾರೆ ಎಂದು ಹೆಂಡತಿ ಕೋಮಲ ಕೆಂಚಪ್ಪಾ ಹೆಗಡೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ
ಈ ವ್ಯಕ್ತಿಯು ಗೋದಿಗೆಂಪು ಮೈಬಣ್ಣ, ಕಪ್ಪು ಕೂದಲು, ಗುಂಡು ಮುಖ ಹೋದಿರುತ್ತಾರೆ, ಎತ್ತರ ೫.೬ ಇಂಚು, ಜಿನ್ಸ್ ಪ್ಯಾಂಟ್ ಮತ್ತು ಟಿ ಶರ್ಟ ಧರಿಸಿರುತ್ತಾರೆ, ಎಡಗೈ ಮೇಲೆ ಅಮ್ಮಾ ಅಂತಾ ಹಚ್ಚೆ ಗುರುತು, ಕನ್ನಡ, ಹಿಂದಿ, ಮರಾಠಿ ಭಾಷೆ ಬಲ್ಲವರಾಗಿರುತ್ತಾರೆ.
ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಇನ್ಸಪೆಕ್ಟರ್ ಬೆಳಗಾವಿ ಕ್ಯಾಂಪ್ ಪೊಲೀಸ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಬೆಳಗಾವಿ ಇವರಿಗೆ ಮಾಹಿತಿ ತಿಳಿಸಬಹುದು ಹಾಗೂ. ನಂ: ೦೮೩೧-೨೪೦೫೨೩೪ ಮತ್ತು ೦೮೩೧-೨೪೦೫೨೭೮. ಗೆ ಸಂಪರ್ಕಿಸಬಹುದು ಎಂದು ಕ್ಯಾಂಪ್ ಪೊಲೀಸ್ ಠಾಣೆ ಬೆಳಗಾವಿ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://pragati.taskdun.com/dispute-over-use-of-property-belonging-to-village-deity-violence-in-chigule-village-25-villagers-injured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ