Kannada NewsKarnataka NewsLatest

ಮಾಸ್ಕ್ ಮತ್ತು ಡೆಟಾಲ್ ಸೋಪ್ ವಿತರಿಸಿದ ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಇಂದು ಇಲ್ಲಿಯ  ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕೋರೋನಾ ಓಡಿಸಿ ದೇಶ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂತ ಜಲಾರಾಂ ಫೌಂಡೇಶನ್ ಸಹಯೋಗದಲ್ಲಿ ಮಾಸ್ಕ್ ಮತ್ತು ಡೆಟಾಲ್ ಸೋಪ್ ಗಳನ್ನು ಕಾರ್ಮಿಕರಿಗೆ ಮತ್ತು ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಂತ ಜಲಾರಾಂ ಫೌಂಡೇಶನ್ ಮುಖ್ಯಸ್ಥ ಕನ್ನುಭಾಯಿ ಟಕ್ಕರ್  ಕಾರ್ಯಕ್ರಮ ಆಯಜಿಸಿದ್ದರು.

ಈ ಸಂದರ್ಭದಲ್ಲಿ ಧರ್ಮ ದಾಸ್ ಏಇಓ,  ಅಪ್ಪಣ್ಣವರ ಡಿವಿಜನಲ್ ಎಕ್ಸಿಕ್ಯೂಟಿವ್, ಕರೂರ,  ಗದಗ ಕರ್,  ಬೆಳ್ಳಿಕಟ್ಟಿ,  ಜಗದೀಶ್ ಮೋಹಿತೆ,  ಪ್ರವೀಣ್ ಬರಗಾದ, ಕುಮಟೆ, ಅಮರ ಸರದೇಸಾಯಿ, ಅಮಿತ್ ಜಾದವ್, ನೀಲಕಂಠ ಮಾಸ್ತಮರಡಿ,  ಸಂದೀಪ್ ಕನ್ನೂರಕರ್  ಮೊದಲಾದವರು ಇದ್ದರು.

Home add -Advt

Related Articles

Back to top button