ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಗೆ ನಿವೇಶನ ನೀಡುವುದಾಗಿ ಹೇಳಿ 18.5 ಲಕ್ಷ ರೂಪಾಯಿಯನ್ನು ಸಂಸ್ಥೆಯೊಂದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
2020ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ವರೆಗೆ ಮಲ್ಟಿ ಲೀಫ್ ವೆಂಚರ್ಸ್ ಎಂಬ ಸಂಸ್ಥೆ ನಿವೇಷನ ಕೊಡುವುದಾಗಿ ಹೇಳಿ ಹಣ ಪಡೆದು ಬಳಿಕ ಆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಆನಂದ್ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ.
ಶೂಟಿಂಗ್ ಗೆ ತೆರಳಿದ್ದ ವೇಳೆ ಮಾಸ್ಟರ್ ಆನಂದ್, ಕೆಂಗೇರಿ ಬಳಿಯ ಕೊಮ್ಮಘಟ್ಟ ಬಳಿ 2000 ಅಡಿ ವಿಸ್ತೀರ್ಣದ ನಿವೇಶನವನ್ನು ನೋಡಿದ್ದರು. ನಿವೇಶನ ಖರೀದಿಗೆಸಾಲ ಸೌಲಭ್ಯ ಕೂಡ ಇರುವುದಾಗಿ ಮಲ್ಟಿ ಲೀಪ್ ವಂಚರ್ಸ್ ಸಂಸ್ಥೆ ಹೇಳಿತ್ತು. 70 ಲಕ್ಷ ರೂಪಾಯಿಗೆ ಖರೀದಿ ಒಪ್ಪಂದವಾಗಿ ಮುಂಗಡ ಹಣ ವನ್ನು ಆನಂದ್ ಪಾವತಿಸಿದ್ದರು. ಹಂತ ಹಂತವಾಗಿ 18.5 ಲಕ್ಷ ಹಣ ನೀಡಿದ್ದರು.
ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಹೆಸರಲ್ಲಿ ನಿವೇಶನ ಖರೀದಿಸುವ ಉದ್ದೇಶವಿದ್ದುದರಿಂದ ದಂಪತಿ ಹೆಸರಲ್ಲಿ ಖರೀದಿ ಕರಾರು ಪತ್ರವನ್ನು ಕಂಪನಿ ಮಾಡಿಕೊಟ್ಟಿತ್ತು. ಈ ನಡುವೆ ಅದೇ ನಿವೇಶನವನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿದೆ. ಈ ಬಗ್ಗೆ ಕಂಪನಿ ಬಳಿ ವಿಚಾರಿಸಿದಾಗ ಯಾವುದೇ ಸ್ಪಂದನೆ ಇಲ್ಲ. ಹಣ ವಾಪಸ್ ಕೇಳಿದರೂ ಕೊಡುತ್ತಿಲ್ಲ. ವಂಚಿಸಿರುವುದು ಗೊತ್ತಾಗುತ್ತಿದ್ದಂತೆ ಮಾಸ್ಟರ್ ಆನಂದ್ ಮಲ್ಟಿ ಲೀಫ್ ವೆಂಚರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ.
BUDS ಕಾಯ್ದೆ 2019ರ ಅಡಿ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ