Latest

ಕಟ್ಟು ಕಥೆಗೆ ಮರುಳಾದ 46ರ ಮಹಿಳೆ

ಮ್ಯಾಟ್ರಿಮೋನಿಯಲ್ಲಿ ಪರಿಚಯನಾಗಿ ಮದುವೆಯಾಗಿ ನಂಬಿಸಿ ಮಹಿಳೆಗೆ 5 ಲಕ್ಷ ದೋಚಿದ ವ್ಯಕ್ತಿ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವರನನ್ನು ಹುಡುಕುತ್ತಿದ್ದ 46 ವರ್ಷದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ 5.6 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಜಯನಗರದ ಮಹಿಳೆ 2019ರಿಂದ ಮ್ಯಾಟ್ರಿಮೋನಿ ಸೈಟಿನಲ್ಲಿ ವರನನ್ನು ಹುಡುಕಲು ತಮ್ಮ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಇತ್ತೀಚೆಗೆ ಅದರಲ್ಲಿ ರಿಯನ್ಶ್ ದಿನೇಶ್ ಆಚಾರ್ಯ ಪರಿಚಯವಾಗಿದ್ದಾನೆ. ಜೊತೆಗೆ ಇಂಗ್ಲೆಂಡ್ ಐಎಸ್‍ಡಿ ಕೋಡ್ ಇರುವ ನಂಬರ್ ಅನ್ನು ಕೂಡ ನೀಡಿದ್ದಾನೆ.

ಮಹಿಳೆಗೆ ಪರಿಚಿತನಾದ ಆಚಾರ್ಯ ಪ್ರತಿ ದಿನ ಫೋನು ಮತ್ತು ಮೆಸೇಜ್ ಮಾಡುತ್ತಿದ್ದ. ತಾನು ಶ್ರೀಮಂತನ ಮಗ ಎಂದು ಪರಿಚಯಮಾಡಿಕೊಂಡಿದ್ದ. ನಮ್ಮ ತಂದೆ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅವರು ಮಲೇಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷ್ಯಾಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದ. ಅಲ್ಲದೇ ಕೆಲ ಉದ್ಯೋಗಿಗಳಿಗೆ ತನ್ನ ತಂದೆ ಸಾಯುವ ಮುನ್ನ ಹಣ ಕೊಟ್ಟಿದ್ದರು. ಆ ಹಣ ವಾಪಸ್ ಪಡೆಯುವ ಪ್ರಯತ್ನದಲ್ಲಿದ್ದೇನೆ ಎಂದು ಕಥೆ ಕಟ್ಟಿದ್ದ.

ಕೆಲ ದಿನಗಳ ಬಳಿಕ ಆ ಹಣವನ್ನು ವಾಪಸ್ ಪಡೆಯಲು ಶುಲ್ಕ ಕಟ್ಟಬೇಕು. ಅದಕ್ಕೆ 6 ಲಕ್ಷ ಹಣ ಬೇಕು ಎಂದು ಮಹಿಳೆಯ ಬಳಿ ಕೇಳಿದ್ದಾನೆ. ಅವನ ಮಾತನ್ನು ನಂಬಿದ ಮಹಿಳೆ ಆನ್‍ಲೈನ್ ಮೂಲಕ ಸುಮಾರು 5.6 ಲಕ್ಷ ಹಣ ಪಾವತಿಸಿದ್ದಾಳೆ.

ಬಳಿಕ ಮೇ 6ರಂದು ಮಲೇಷ್ಯಾದಿಂದ ಅರ್ಚನಾ ಹೆಸರಿನ ಕಸ್ಟಮ್ ಅಧಿಕಾರಿ ಕರೆ ಮಾಡಿ ನೀವು ಕಳುಹಿಸಿರುವ ಹಣವನ್ನು ಮಲೇಷ್ಯಾದಲ್ಲಿ ರಿಲೀಸ್ ಮಾಡಲು 74 ಸಾವಿರ ಶುಲ್ಕ ಕಟ್ಟಬೇಕು ಎಂದು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಮಹಿಳೆ ನಡೆದ ವಿಚಾರವನ್ನು ಕುಟುಂಬಸ್ಥರ ಬಳಿ ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಆಗ ತಾನು ಮೋಸ ಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button