ಪ್ರಗತಿವಾಹಿನಿ ಸುದ್ದಿ : ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿಯ ಅಮಾನವೀಯ ಅತ್ಯಾಚಾರ ಹಾಗೂ ಕೊಲೆ ಘಟನೆಗೆ ಸಂಬಂಧಿಸಿ ವೈದ್ಯರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದಾರೆ.
ಹತ್ಯೆ ಪ್ರಕರಣ ಸಂಬಂಧ ನ್ಯಾಯಕ್ಕೆ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಅಮರಣಾಂತ ಉಪವಾಸಕ್ಕೆ ಸಂಪೂರ್ಣ ಬೆಂಬಲವನ್ನು ದೇಶದಾದ್ಯಂತವಿರುವ ರೆಸಿಡೆಂಡ್ ಡಾಕ್ಟರ್ಸ್ ಅಸೋಸಿಯೇಷನ್ಗಳನ್ನು ಪ್ರತಿನಿಧಿಸುತ್ತಿರುವ ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಒಮ್ಮತ ಸೂಚಿಸಿದೆ.
ಈ ಕಾರಣದಿಂದಾಗಿ ಇಂದಿನಿಂದ ವೈದ್ಯಕೀಯ ತುರ್ತು ಸೇವೆ ಹೊರತುಪಡಿಸಿ, ಇತರೆ ಸೇವೆ ಸ್ಥಗಿತಕ್ಕೆ FAIMA ಕರೆ ನೀಡಿದೆ. ಹೀಗಾಗಿ ರಾಷ್ಟ್ರವ್ಯಾಪಿ ದಿನದ 24 ಗಂಟೆಯೂ ತುರ್ತು ಸೇವೆಗಳು ಮಾತ್ರ ಇರಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ