Kannada NewsKarnataka NewsLatest

 ಗೂಗಲ್ ಮೀಟ್ ಮೂಲಕ ಸಚಿವೆ  ಶಶಿಕಲಾ ಜೊಲ್ಲೆ ಇಷ್ಟಲಿಂಗ ಪೂಜೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-  ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗರು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಗೂಗಲ್ ಮೀಟ್ ಮೂಲಕ ಭಾಗವಹಿಸಿ, ಮಾತನಾಡಿದರು.
ತುಮಕೂರು ಸಿದ್ದಗಂಗಾ ಮಠದ  ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಬೀದರ್ ನ ಅಕ್ಕ ಅನ್ನಪೂರ್ಣತಾಯಿ ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವೆ ಶಶಿಕಲಾ ಜೊಲ್ಲೆ  ಮಾತನಾಡಿ ನಮ್ಮ ದೇಶದ ಸಂಸ್ಕೃತಿ, ಹಬ್ಬ ಹರಿದಿನಗಳನ್ನು ವಿದೇಶದಲ್ಲೂ ಆಚರಿಸಿ, ಅಲ್ಲಿನ ಜನರಿಗೆ ಪರಿಚಯಿಸುತ್ತಿರುವ ನಮ್ಮ ಕನ್ನಡಿಗರ ಕಾರ್ಯ ಮೆಚ್ಚುವಂತದ್ದು. ಇದು ನಿಮ್ಮ ದೇಶಪ್ರೇಮವನ್ನು ಎತ್ತಿ ತೋರಿಸುತ್ತದೆ. ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ನಿಮ್ಮೆಲ್ಲರಿಗೂ ಶಿವ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Related Articles

Back to top button