Kannada NewsLatest

ಮೆಳ್ಳಿಗೇರಿ ಅಧ್ಯಕ್ಷತೆಯಲ್ಲಿ ಎನ್ಎಎಸ್ಡಿ ಸಮಿತಿ ಪುನಾರಚನೆ; ಬೆಳಗಾವಿಯ 6 ಸದಸ್ಯರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ನಡೆಸಲ್ಪಡುವ ನ್ಯಾಶನಲ್ ಅಕಾಡೆಮಿ ಫಾರ್ ಸ್ಕಿಲ್ ಡೆವಲಪ್ ಮೆಂಟ್ -ಎನ್ಎಎಸ್ಡಿ ಸಲಹಾ ಸಮಿತಿ ರಚಿಸಲಾಗಿದ್ದು, ಏಕಸ್ ಚೇರಮನ್ ಅರವಿಂದ ಮೆಳ್ಳಿಗೇರಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

  ವಿಟಿಯು ದಾಂಡೇಲಿಯಲ್ಲಿ ಎನ್ಎಎಸ್ಡಿ ಕೇಂದ್ರ ಹೊಂದಿದೆ. ಬೆಳಗಾವಿಯ ವಿಟಿಯು ವಿಸಿ ಕರಿಸಿದ್ದಪ್ಪ, ಜಿಐಟಿ ಪ್ರಾಚಾರ್ಯ ಆನಂದ ದೇಶಪಾಂಡೆ, ಕ್ರೆಡೈ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಸರ್ವೋ ಕಂಟ್ರೋಲ್ ನ ದೀಪಕ್ ದಡೋತಿ, ನೇತಲ್ಕರ್ ಗ್ರುಪ್ ನ ಸೋನಿಯಾ ನೇತಲ್ಕರ್ ಸದಸ್ಯರಾಗಿದ್ದಾರೆ.

ಪಿ.ಮದನ್ ಮೋಹನ್, ಸಂತೋಷ ಹುರಳಿಕೊಪ್ಪಿ, ವಿವೇಕ ಪವಾರ್, ಅನಂತ ಕೊಪ್ಪರ್, ಪ್ರಕಾಶ ಪ್ರಭು, ಡಾ.ಎ.ಮೌಲಿಶ್ರೀ, ನಾರಾಯಣ ಟೋಸೂರ್, ವಿವೇಕ ಪುಣೇಕರ್ ಹಾಗೂ ವಾದಿರಾಜ ಕಟ್ಟಿ ಸಹ ಸಮಿತಿಯ ಸದಸ್ಯರಾಗಿದ್ದಾರೆ. 

Home add -Advt

ವಿಟಿಯು ರಜಿಸ್ಟ್ರಾರ್ ಡಾ.ಸತೀಶ್ ಅಣ್ಣಿಗೇರಿ ಕಾರ್ಯದರ್ಶಿಯಾಗಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button