ಆಹಾರದಿಂದಲೂ ತಗ್ಗಿಸಬಹುದು ಮಾನಸಿಕ ಒತ್ತಡ !

ಆಹಾರದಿಂದಲೂ ತಗ್ಗಿಸಬಹುದು ಮಾನಸಿಕ ಒತ್ತಡ !

ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್

ಇಂದು ಮಾನಸಿಕ ಒತ್ತಡದಿಂದ ಬಳಲದೇ ಇರುವ ಮನುಷ್ಯರೇ ಇಲ್ಲ ಎಂಬಂತಹ ಸ್ಥಿತಿಯಿದೆ. ನೈಸರ್ಗಿಕವಾಗಿ ಉಂಟಾಗುವ ಒತ್ತಡದ ಪ್ರತಿಕ್ರಿಯೆ ಹಾನಿಕಾರಕವಲ್ಲ. ವಾಸ್ತವವಾಗಿ, ಇದು ಜೀವಿಸಬಲ್ಲ ಪ್ರವೃತ್ತಿಯ ನಿರ್ಣಾಯಕ ಅಂಶ. ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಾವು ನಿರಂತರ ಒತ್ತಡಕ್ಕೆ ಸಿಲುಕುತ್ತೇವೆ. ಈ ಅತಿಯಾದ ಮತ್ತು ನಿರಂತರವಾದ ಮಾನಸಿಕ ಒತ್ತಡದ ಪ್ರತಿಕ್ರಿಯೆಯೆ ಹಾನಿಕಾರಕವಾಗಿದೆ. ಒತ್ತಡದಿಂದ ಮುಕ್ತವಾಗಿದ್ದೇನೆ ಎನ್ನುವ ಯಾರೊಬ್ಬರೂ ನಮಗೆ ಸಿಗಲು ಸಾಧ್ಯವಿಲ್ಲ. ಹಾಗಾಗಿ ಒತ್ತಡವನ್ನು ನಿರ್ವಹಿಸಲು ಕಲಿಯುವುದು ನಮ್ಮ ದಿನಚರಿಯ ಒಂದು ಭಾಗವಾಗಬೇಕಾದ ಅನಿವಾರ್ಯತೆ ಇದೆ.

ಒತ್ತಡವನ್ನು ನಿವಾರಿಸಲು ಧ್ಯಾನ ತಂತ್ರಗಳನ್ನು ತಿಳಿದಿರಬೇಕು. ಆದರೆ ಅದನ್ನು ಪ್ರಾರಂಭಿಸುವುದು, ದಿನನಿತ್ಯ ತಪ್ಪದೇ ಮುಂದುವರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಧ್ಯಾನ ತಂತ್ರಗಳ ಜತೆಗೆ ಆಹಾರ ಕ್ರಮದ ಮೂಲಕವೂ ದೇಹದ ಅತಿಯಾದ ಒತ್ತಡದ ಪ್ರತಿಕ್ರಿಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಅರಿಶಿಣ ಹಾಗೂ ತುಳಸಿ ಬಹಳ ಪ್ರಮುಖವಾದದ್ದು.

ಮಾನಸಿಕ ಒತ್ತಡದ ಲಕ್ಷಣ
ಮನುಷ್ಯ ಸೇವಿಸುವ ಆಹಾರ ಹಾಗೂ ಆರೋಗ್ಯ ಪರಸ್ಪರ ಸಂಬಂಧಹೊಂದಿದೆ. ಆಹಾರ ಜೀರ್ಣವಾಗುವ ಕ್ರಿಯೆ, ನರಮಂಡಲ, ದುಗ್ಧರಸ ವ್ಯವಸ್ಥೆ ಎಲ್ಲವೂ ಸಹ ಒಂದಕ್ಕೊಂದು ಕೊಂಡಿಯಾಗಿದೆ. ದುಗ್ಧರಸ ವ್ಯವಸ್ಥೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ.
ತೂಕ ಹೆಚ್ಚಾಗುವುದು, ಕಿಬ್ಬೊಟ್ಟೆಯ ಬೊಜ್ಜು ಹಾಗೂ ರೋಗನಿರೋಧಕ ಶಕ್ತಿಯ ಕಡಿಮೆಯಾಗುವುದು ಮಾನಸಿಕ ಒತ್ತಡದ ಲಕ್ಷಣವಾಗಿರಬಹುದು ಎನ್ನುತ್ತಾರೆ ತಜ್ಞರು.

ಒತ್ತಡ ತಗ್ಗಿಸಲು ಪರಿಣಾಮಕಾರಿ
ಅರಿಶಿಣವು ಅನೇಕ ಕಾಯಿಲೆಗಳ ವಿರುದ್ಧ ಹೋರಾಡಬಲ್ಲ ಸಾಮಥ್ರ್ಯ ಹೊಂದಿದೆ. ಅರಿಶಿಣದ ಕೆಲ ಅಂಶಗಳು ದೇಹದಲ್ಲಿನ ಕಾರ್ಟಿಸೋಲ್ (ಒತ್ತಡ-ಪ್ರೇರಿತ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದುಗ್ಧರಸ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಅರಿಶಿಣದ ಬಗ್ಗೆ ಇರುವ ಸಾಂಪ್ರದಾಯಿಕ ತಿಳುವಳಿಕೆಯ ಪ್ರಕಾರ ಅದರ ಸಾರಗಳು ಪ್ರತಿಕಾಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಹಾಗಾಗಿ ದೇಹದಲ್ಲಿನ ಸೋಂಕಿನ ದಾಳಿಯ ವಿರುದ್ಧ ಹೋರಾಡುತ್ತವೆ ಎಂಬುದು ವಿಜ್ಞಾನದಿಂದ ಕೂಡ ಸಾಬೀತಾಗಿದೆ. ಅರಿಶಿಣವು ದುಗ್ಧರಸ ವ್ಯವಸ್ಥೆಯ ಮೂಲಕ ವೈರಾಣುಗಳ ಹರಿವನ್ನು ತಡೆಯಲು ಸಹಕಾರಿಯಾಗಿದೆ.

ಅರಿಶಿಣ ಪುಡಿ ಸಾಂಪ್ರದಾಯಿಕ ಭಾರತೀಯ ಅಡುಗೆಯ ಒಂದು ಭಾಗವಾಗಿದ್ದು ಇದರ ಹೆಚ್ಚಿನ ಪ್ರಮಾಣ ಮಾನಸಿಕ ಒತ್ತಡ ತಗ್ಗಿಸುವುದಕ್ಕೆ ಸಹಕಾರಿಯಾಗಿದೆಕೀ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಪದ್ಧತಿಯಲ್ಲಿ ಅನಾದಿಯಿಂದಲೂ ಅರಿಶಿಣಕ್ಕೆ ಪ್ರಮುಖ ಸ್ಥಾನವಿದೆ.

ಅದಕ್ಕಾಗಿ ನೀವು ಅರಿಶಿನ ಪುಡಿ, ತುಪ್ಪ ಮತ್ತು ಕರಿಮೆಣಸಿನೊಂದಿಗೆ ತಯಾರಿಸಿದ ಪೇಸ್ಟ್ ಅನ್ನು ಸೇವಿಸಬಹುದು. ಪಾಶ್ಚಾತ್ಯರಿಂದ ಸಾಕಷ್ಟು ಟರ್ಮರಿಕ್ ಲ್ಯಾಟ್ಟೆ ಸೇವನೆ ಅದರ ಇನ್ನೊಂದು ರೂಪವಾಗಿದೆ.

ತುಳಸಿ ನಮಗೆ ಪರಿಚಿತವಾಗಿರುವ ಮತ್ತೊಂದು ಮೂಲಿಕೆ, ಈ ಸಸ್ಯವು ದೇಹದಲ್ಲಿ ನಿರ್ವಹಿಸುವ ಅನೇಕ ಪಾತ್ರದ ಮಹತ್ವ ನಮಗೆ ಅರಿವಿದೆ. ಒತ್ತಡಕ್ಕೆ ಒಳಗಾದಾಗ ದೇಹವು ಬಿಡುಗಡೆ ಮಾಡುವ ಅತ್ಯಂತ ಹಾನಿಕಾರಕ ಕಣಗಳನ್ನು ತಡೆಯಬಲ್ಲ ಶಕ್ತಿ ತುಳಸಿಗಿದೆ. ಅರಿಶಿಣದಂತೆ, ತುಳಸಿಯು ದೇಹದ ಮೇಲೆ ಮಾನಸಿಕ ಒತ್ತಡದಿಂದ ಆಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಉತ್ತಮವಾಗಿ ನಿದ್ರೆ ಮಾಡುವುದು ಸಹ ಮಾನಸಿಕ ಒತ್ತಡ ಕಡಿಮೆ ಮಾಡಲು ಅತ್ಯಂತ ಸಹಕಾರಿಯಾಗುತ್ತದೆ. ತುಳಸಿಯ ನಿಯಮಿತ ಸೇವನೆಯಿಂದ, ತುಳಸಿಯ ತಾಜಾ ಎಲೆಗಳನ್ನು ಪಾನೀಯಗಳಲ್ಲಿ ಸೇರಿಸಿ ಅಥವಾ ಕಷಾಯ ತಯಾರಿಸಿ ಕುಡಿದರೆ ವಿಶ್ರಾಂತಿ ನಿದ್ರೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆಗೆ ಸಹಾಯವಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಬಿಗ್ ಶಾಕ್; ಕರ್ನಾಟಕಕ್ಕೆ ಹೋಗುವುದಾಗಿ ಮತ್ತೊಂದು ತಾಲೂಕಿನ ಜನತೆ ಪಟ್ಟು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button