Latest

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ ನಡೆದಿದೆ.

ಕತೀಜಾ ಕೂಬ್ರ (29) ಮೃತ ಮಹಿಳೆ. ಪತಿಯೇ ಪತ್ನಿಯನ್ನು ಹತ್ಯೆಗೈದು ಬಳಿಕ ನೇಣು ಬಿಗಿದಿದ್ದಾನೆ ಎಂದು ಕತೀಜಾ ಪೋಷಕರು ಆರೋಪಿಸಿದ್ದಾರೆ.

Home add -Advt

ಪೋಷಕರ ದೂರಿನ ಹಿನ್ನೆಲೆಯಲ್ಲಿ ಪತಿ ಮೆಹಬೂಬ್ ಪರೀಷ್, ಮಾವ, ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಕತೀಜಾ ತಂದೆ, ಮದುವೆಯಾದಾಗಿನಿಂದಲೂ ಕತಿಜಾ ಪತಿ ವಿನಾಕಾರಣಕ್ಕೆ ಜಗಳ ಮಾಡುತ್ತಿದ್ದ. ಆತನಿಗೆ ಇನ್ನೋರ್ವ ಮಹಿಳೆ ಜೊತೆ ಸಂಬಂಧವಿದೆ. ಈಗ ನನ್ನ ಮಗಳನ್ನೇ ಹೊಡೆದು ಕೊಂದು ಬಳಿಕ ಆಕೆಯೇ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸಲು ಹೊರಟಿದ್ದಾನೆ. ತನ್ನ ಅಳಿಯ ಮೆಹಬೂಬ್ ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ ಬಿಗ್ ಶಾಕ್; ಕರ್ನಾಟಕಕ್ಕೆ ಹೋಗುವುದಾಗಿ ಮತ್ತೊಂದು ತಾಲೂಕಿನ ಜನತೆ ಪಟ್ಟು

https://pragati.taskdun.com/karnataka-maharastrea-border-issueakkalakota-villagekarnatakamahajan-report/

Related Articles

Back to top button