ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಉದ್ಯೋಗ ಕಳೆದುಕೊಂಡು ಸಾಲದ ಬಾಧೆಗೆ ಟೆಕ್ಕಿಯೊಬ್ಬ2.5 ವರ್ಷದ ತನ್ನ ಮಗಳನ್ನು ಬಿಗಿಯಾಗಿ ತಬ್ಬಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಗುಜರಾತ್ ಮೂಲದ ರಾಹುಲ್ ಪರ್ಮಾರ್ (45) ಆರೋಪಿ. ಈತ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ತೊಡಗಿಸಿ ನಷ್ಟ ಅನುಭವಿಸಿದ್ದ. ತನ್ನ ಆಸ್ತಿ ಒತ್ತೆ ಇಟ್ಟು ಯಾರೋ ತನ್ನ ವಾಹನ ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದಾರೆ ಎಂದು ಪತ್ನಿಗೆ ಸುಳ್ಳು ಹೇಳಿದ್ದ.
ಹಣದ ತೀವ್ರ ಕೊರತೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಈತ ಮಗಳು ಜಿಯಾಳನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಬೆಂಗಳೂರು ಹೊರವಲಯದ ಬೆಂಗಳೂರು-ಕೋಲಾರ ಹೆದ್ದಾರಿಯ ಕೆಂದಟ್ಟಿ ಕರೆ ಬಳಿ ಬಿಗಿಯಾಗಿ ಅವಳನ್ನು ತಬ್ಬಿ ಕೊಲೆ ಮಾಡಿದ್ದಾಗಿ ಪೊಲೀಸ್ ತನಿಖೆ ವೇಳೆ ಹೇಳಿಕೊಂಡಿದ್ದಾನೆ. ಕೊಲೆಗೈದ ನಂತರ ಮಗುವಿನ ಶವವನ್ನು ಕೆರೆಯೊಂದಕ್ಕೆ ಎಸೆದಿದ್ದ.
“ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಸಾಗುತ್ತಿದ್ದ ಮಗಳು ಚಾಕ್ಲೇಟ್ ಹಾಗೂ ಬಿಸ್ಕಿಟ್ ಕೊಡಿಸುವಂತೆ ಹಠ ಮಾಡಿ ಅಳಲಾರಂಭಿಸಿದಳು. ಆಕೆಗೆ ಏನನ್ನು ಕೊಡಿಸುವಷ್ಟ ಹಣ ನನ್ನ ಬಳಿ ಇರಲಿಲ್ಲ. ಅದಕ್ಕಾಗಿ ಕೊಲೆ ಮಾಡಿ ಅವಳೊಂದಿಗೆ ನಾನೂ ಕೆರೆಗೆ ಜಿಗಿದೆ. ಆದರೆ ಮುಳುಗಲಿಲ್ಲ,” ಎಂದು ಆರೋಪಿ ಹೇಳಿದ್ದಾನೆ.
ತನಿಖೆಗಾಗಿ ಆರೋಪಿಯನ್ನು ಪೊಲೀಸರು ಕೆರೆ ದಂಡೆಗೆ ಕರೆದೊಯ್ದ ವೇಳೆ ಅಲ್ಲೇ ಇದ್ದ ತನ್ನ ತಂದೆ ವಿನೋದ್ ಹಾಗೂ ತಾಯಿ ಭವ್ಯಾರನ್ನು ನೋಡಿ ಗದ್ಗದಿತನಾದ ಆರೋಪಿ ರಾಹುಲ್ ಪರ್ಮಾರ್ ಅಲ್ಲೇ ಬಸವಳಿದಿದ್ದಾನೆ. ಕೆಲ ಕ್ಷಣಗಳಲ್ಲಿ ಮತ್ತೆ ಚೇತರಿಸಿಕೊಂಡು ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.
ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆತ ಹಣದ ಕೊರತೆಯಿಂದ ಆಕೆಯ ಆಸೆಗಳನ್ನು ಈಡೇರಿಸಲಾಗದೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತಳೆದಿದ್ದನೆನ್ನಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ