Karnataka NewsLatest

ಮತ್ತೆ ಪುಂಡಾಟ ಮೆರೆದ ಎಂಇಎಸ್; ಸಾರಿಗೆ ಬಸ್ ಗೆ ಮಸಿ; ಕಾರುಗಳ ಮೇಲೆ ಕಲ್ಲು ತೂರಾಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಎಂಇಎಸ್ ಪುಂಡಾಟಿಕೆ ವಿರುದ್ಧ ರಾಜ್ಯದಲ್ಲಿ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಾಗುತ್ತಿದ್ದರೂ ದುಷ್ಕೃತ್ಯ ಮುಂದುವರೆಸಿರುವ ಎಂಇಎಸ್ ಕಿಡಿಗೇಡಿಗಳು ರಾಜ್ಯದ ಸಾರಿಗೆ ಬಸ್, ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ.

ಮುಂಬೈನಿಂದ ಕಲಬುರ್ಗಿಗೆ ಆಗಮಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ತಡೆದ ಎಂಇಎಸ್ ಕಾರ್ಯಕರ್ತರು, ಬಸ್ ಗೆ ಅಸಿ ಬಳಿದಿದ್ದಾರೆ. ಅಲ್ಲದೇ ಜೈ ಶಿವಾಜಿ ಎಂದು ಬರೆದು ಬಸ್ ಗೆ ಎಂ ಇಎಸ್ ಬಾವುಟ ಕಟ್ಟಿದ್ದಾರೆ. ಬಳಿಕ ಬಸ್ ಚಾಲಕನ ಕೈಯಲ್ಲಿ ಬಲವಂತವಾಗಿ ಎಂಇಎಸ್ ಬಾವುಟಕೊಟ್ಟು ಜೈ ಶಿವಾಜಿ ಎಂದು ಹೇಳಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

Home add -Advt

ಇನ್ನೊಂದೆಡೆ ಬೆಳಗಾವಿ ಜಿಲ್ಲೆ ಗೋಕಾಕ್ ನೋಂದಣಿಯಿರುವ ಕಾರಿನ ಮೇಲೂ ಕಲ್ಲು ತೂರಾಟ ನಡೆಸಿ, ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಎಂಇಎಸ್ ಪುಂಡರ ಈ ಕೃತ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮುಂದುವರೆದ ಶಿವಸೇನೆ ಪುಂಡಾಟ; ಕನ್ನಡಿಗರ ಮನೆಗೆ ನುಗ್ಗಿ ಥಳಿಸಿದ ಪುಂಡರು

Related Articles

Back to top button