ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಮತ್ತೆ ಹೊತ್ತಿ ಉರಿದಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ಸಂಘರ್ಷದ ದಳ್ಳುರಿಯೇನೋ ಕೊಂಚ ತಣ್ಣಗಾಗಿದೆ. ಆದರೆ ಇಲ್ಲಿನ ಎಂಇಎಸ್ ಮುಖಂಡರ ಪ್ರತ್ಯೇಕತೆಯ ತುರುಸು ಇನ್ನೂ ಆರಿಲ್ಲ.
ಬೆಳಗಾವಿಯ ಎಂಇಎಸ್ ಮುಖಂಡರ ನಿಯೋಗವೊಂದು ಮುಂಬೈಗೆ ತೆರಳಿ ಶಿವಸೇನೆ (ಠಾಕ್ರೆ ಬಣ)ದ ಮುಖ್ಯಸ್ಥ ಉದ್ಧವ ಠಾಕ್ರೆ ಅವರನ್ನು ಭೇಟಿ ಮಾಡಿದೆ.
ಮುಂಬೈನ ಆಜಾದ್ ಮೈದಾನದಲ್ಲಿ ಮಂಗಳವಾರ ಬೆಳಗಾವಿ ಮರಾಠಿ ಭಾಷಿಕರ ವಿವಿಧ ಬೇಡಿಕೆಗಳಿಗಾಗಿ ಧರಣಿ ಕೂಡ ನಡೆಸಲಾಗಿದೆ.
ಈ ನಿಯೋಗ ಗಡಿ ವಿಚಾರ ಕುರಿತಂತೆ ಮುಂದಿನ ನಡೆಗಳ ಕುರಿತು ಉದ್ಧವ್ ಜೊತೆ ಚರ್ಚಿಸಿದ್ದು ಸದ್ಯ ಅಮಿತ್ ಶಾ ಸಂಧಾನದ ಸೂಚನೆಗಳ ಹಿನ್ನೆಲೆಯಲ್ಲಿ ಎಂಇಎಸ್ ಮೂಕಾಭಿನಯ ಮಾತ್ರ ಮುಂದುವರಿದಿದೆ.
ರಮಾಕಾಂತ ಕೊಂಡುಸ್ಕರ್ ಎಂಎಸ್ ಗೆ?:
ಆಶ್ಚರ್ಯಕರ ಬೆಳವಣಿಗೆಯಲ್ಲಿ ಈ ಹಿಂದೆ ಪ್ರಮೋದ್ ಮುತಾಲಿಕ ಅವರ ಶ್ರೀರಾಮ ಸೇನೆಯಲ್ಲಿದ್ದು ಅಲ್ಲಿಂದ ಹೊರಬಿದ್ದು ತಮ್ಮದೇ ಆದ ಶ್ರೀರಾಮ ಸೇನೆ ಹಿಂದುಸ್ಥಾನ್ ಸಂಘಟನೆ ಕಟ್ಟಿಕೊಂಡು ಕಾರ್ಯನಿರತರಾಗಿದ್ದ ರಮಾಕಾಂತ ಕೊಂಡುಸ್ಕರ್ ಈ ನಿಯೋಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೂಲಕ ಕೊಂಡುಸ್ಕರ್ ಎಂಇಎಸ್ ಸೇರ್ಪಡೆ ಕುರಿತಂತೆ ಜಿಜ್ಞಾಸೆಗಳು ಹುಟ್ಟುಕೊಳ್ಳುವಂತಾಗಿವೆ.
ಉದ್ಘವ್ ಠಾಕ್ರೆಯವರನ್ನು ಭೇಟಿಯಾದ ನಿಯೋಗದಲ್ಲಿ ಎಂಇಎಸ್ ಮುಖಂಡರಾದ ಆರ್.ಎಂ. ಚೌಗುಲೆ, ಮದನ್ ಬಾಮನೆ, ಶಿವಾನಿ ಪಾಟೀಲ್, ಸಾಧನಾ ಪಾಟೀಲ್, ಬಲವಂತ ಶಿಂದೋಲ್ಕರ್, ಸುಹಾಸ್ ಹುದ್ದಾರ್ ಮೊದಲಾದವರಿದ್ದರು.
ಶಿಕ್ಷಕ ಅರ್ಜುನ ಮಾಳವನವರ ಸೇವಾ ನಿವೃತ್ತಿ; ಸನ್ಮಾನ
https://pragati.taskdun.com/teacher-arjuna-malavanvars-retirement-from-service-respect-felicitation/
ತಪಸಿಯಲ್ಲಿ ಶೀಘ್ರವೇ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ: ಬಾಲಚಂದ್ರ ಜಾರಕಿಹೊಳಿ
https://pragati.taskdun.com/atal-bihari-vajpayee-residential-school-to-be-inaugurated-soon-in-tapasi-balachandra-jarakiholi/
https://pragati.taskdun.com/d-k-shivakumarhasanapressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ