Kannada NewsKarnataka NewsLatest

ಶಿಕ್ಷಕ ಅರ್ಜುನ ಮಾಳವನವರ ಸೇವಾ ನಿವೃತ್ತಿ; ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ತಾಲೂಕಿನ ಪಂತ ನಗರದ ನಿವಾಸಿ, ಅರ್ಜುನ ದು. ಮಾಳವನವರ ಅವರು ಸತತ 33 ವರ್ಷಗಳ ಕಾಲ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಫೆ.28 ರಂದು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ  ಶಿವಬಸವನಗರ ಗೆಳೆಯರ ಬಳಗ ಹಾಗೂ ರಾಧಾಕೃಷ್ಣನ್ ಗುರುಬಳಗದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ತಮ್ಮ ಸೇವೆಯುದ್ದಕ್ಕೂ ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಅರ್ಜುನ ಮಾಳವನವರ ಅವರಿಗೆ ಸತ್ಕಾರ ಮಾಡಲು ಬೇರೆ ಬೇರೆ ಊರುಗಳಿಂದ ಅವರ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.

Home add -Advt

ತಾವು ಸೇವೆ ಸಲ್ಲಿಸಿದ ಬಹುತೇಕ ಶಾಲೆಗಳಲ್ಲಿ ಇವರು ಅನೇಕ ಅಭಿವೃದ್ಧಿ ಕೆಲಸಗಳನ್ನು ‌ಕೈಗೆತ್ತಿಕೊಂಡಿದ್ದರು. ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಶಾಲಾ ಬ್ಯಾಗ್, ಪುಸ್ತಕ ಸಾಮಾಗ್ರಿಗಳನ್ನು ವಿತರಿಸುವುದರ ಜತೆಗೆ ಕೋವಿಡ್ ಸಂದರ್ಭದಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದ ಇಂಡಾಲನಗರ ಸರಕಾರಿ ಶಾಲೆಯ ಮಕ್ಕಳ ಪಾಲಕರಿಗೆ ಸುಮಾರು ಎರಡು ತಿಂಗಳಿಗೆ ಆಗುವ ದವಸ ಧಾನ್ಯಗಳನ್ನು ದಾನಿಗಳಿಂದ ‌ಕೊಡುಗೆಯಾಗಿ ನೀಡಿದ್ದರು.

ಇವರ 33 ವರ್ಷಗಳ ಸಾರ್ಥಕ ಸೇವೆಯ ಬಗ್ಗೆ ಅನೇಕ ಜನರು ಕೊಂಡಾಡಿದರು.  ಸಮಾರಂಭದಲ್ಲಿ ಬೆಳಗಾವಿ ತಾಲೂಕಿನ ಗ್ರಾಮೀಣ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಶಿವಬಸವ ನಗರದ ನಿವಾಸಿಗಳು, ಗೆಳೆಯರ ಬಳಗ, ರಾಧಾಕೃಷ್ಣನ್ ಗುರು ಬಳಗದ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ತಪಸಿಯಲ್ಲಿ ಶೀಘ್ರವೇ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ:  ಬಾಲಚಂದ್ರ ಜಾರಕಿಹೊಳಿ

https://pragati.taskdun.com/atal-bihari-vajpayee-residential-school-to-be-inaugurated-soon-in-tapasi-balachandra-jarakiholi/

*ಖರ್ಗೆ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರ; ಡಿ.ಕೆ.ಶಿವಕುಮಾರ್ ಕೆಂಡಾಮಂಡಲ; ಬಿಜೆಪಿ ಅಧ್ಯಕ್ಷರಿಗೂ ಟಾಂಗ್ ನೀಡಿದ ಕೆಪಿಸಿಸಿ ಅಧ್ಯಕ್ಷ*

https://pragati.taskdun.com/d-k-shivakumarhasanapressmeet/

*ಪ್ರವಾಹದಿಂದ ಜನ ತತ್ತರಿಸಿದರೂ ಬಾರದ ಪ್ರಧಾನಿ ಮೋದಿ, ಅಮಿತ್ ಶಾ ಈಗ ವೋಟಿಗಾಗಿ ವಾರಕ್ಕೊಮ್ಮೆ ಬರುತ್ತಿದ್ದಾರೆ; ಡಿ.ಕೆ.ಶಿವಕುಮಾರ್ ಆಕ್ರೋಶ*

https://pragati.taskdun.com/d-k-shivakumarhasanaprajadhwani/

Related Articles

Back to top button