*ಪಾಲಿಕೆಯಲ್ಲಿ ಕನ್ನಡ ಕಡ್ಡಾಯಕ್ಕೆ MES ಕಿರಿಕ್: ಸಾಮಾನ್ಯ ಸಭೆ ಮುಂದೂಡಿದ ಮೇಯರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ಆದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಕಡ್ಡಾಯ ಕನ್ನಡ ಅನುಷ್ಠಾನ ಮಾಡುತ್ತಿದ್ದಂತೆ, ಇಂದು ನಡೆದ ಸಾಮಾನ್ಯ ಸಭೆ ರಣಾಂಗಣವಾಗಿರುವ ಘಟನೆ ನಡೆದಿದೆ.
ಇಂದಿನ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸಭೆಯ ಕಾರ್ಯಸೂಚಿ ಮರಾಠಿ ಭಾಷೆಯಲ್ಲಿ ನೀಡುವಂತೆ ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ಆದೇಶಕ್ಕೆ ಎಂಇಎಸ್ ಸದಸ್ಯ ರವಿ ಸಾಳುಂಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಂಇಎಸ್ ಸದಸ್ಯ ಸಾಳುಂಕೆ ವಿರುದ್ಧ ಬಿಜೆಪಿ ಹಾಗೂ ಪಾಲಿಕೆ ನಾಮನಿರ್ದೇಶನ ಸದಸ್ಯ ರಮೇಶ್ ಸೊಂಟಕ್ಕಿಯಿಂದ ಎಂಇಎಸ್ ಸದಸ್ಯನಿಗೆ ತರಾಟೆ ತಗೆದುಕೊಳ್ಳಲಾಗಿದೆ.
ಇದು ಕರ್ನಾಟಕ, ಇಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿ ಭಾಷೆ ಬೇಕಿದ್ದರೆ ರವಿ ಸಾಳುಂಕೆ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಕಿರಿಕ್ ಮಾಡಿದ ಎಂಇಎಸ್ ಸದಸ್ಯನ ವಿರುದ್ಧ ಕ್ರಮಕ್ಕೆ ಪಾಲಿಕೆಯ ಎರಡು ಪಕ್ಷದ ಸದಸ್ಯರು ಮೇಯರ್ ಮಂಗೇಶ್ ಪವಾರ್‌ಗೆ ಒತ್ತಾಯಿಸಿದ್ದಾರೆ.
ಸಾಮಾನ್ಯ ಸಭೆಯಿಂದ ಎಂಇಎಸ್ ಸದಸ್ಯ ರವಿ ಸಾಳುಂಕೆ ಅಮಾನತು ಗೊಳಿಸಲು ಒತ್ತಾಯ ಕೇಳಿ ಬರುತ್ತಿದ್ದಂತೆ, ಪಾಲಿಕೆಯಲ್ಲಿ ಗದ್ದಲ ಆರಂಭ ಆಗುತ್ತಿದಂತೆ ಮೇಯರ್ ಮಂಗೇಶ ಪವಾರ್ ಅವರು ಸಭೆ ಮುಂದೂಡಿದ್ದಾರೆ.