ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮೇಟ್ರೋ ಪಿಲ್ಲರ್ ಕಾಮಗಾರಿಗೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಮೆರೋ ಪಿಲ್ಲರ್ ನಿರ್ಮಿಸಲು ಕಟ್ಟಲಾಗಿದ್ದ ಕಬ್ಬಿಣದ ರಾಡ್ ಗಳು ಬಿದ್ದು ಗಾಯಗೊಂಡಿದ್ದ ತಾಯಿ ಹಾಗೂ ಮಗು ಚಿಕಿತ್ಸ್ರ್ ಫಲಿಸದೇ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.
28 ವರ್ಷದ ತೇಜಸ್ವಿನಿ ಹಾಗೂ ಎರಡುವರೆ ವರ್ಷದ ಮಗು ವಿಹಾನ್ ಮೃತರು. ಇಂದು ಬೆಳಿಗ್ಗೆ ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ಬಳಿ ಕಲ್ಯಾಣನಗರ ಹಾಗೂ ಹೆಬ್ಬಾಳ ಮಾರ್ಗದಲ್ಲಿ ಮೆಟ್ರೋ ಪಿಲ್ಲರ್ ನಿರ್ಮಿಸಲು ಕಟ್ಟಲಾಗಿದ್ದ ಕಬ್ಬಿಣದ ರಾಡ್ ಗಳು ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿ ಹಾಗೂ ಮಗುವಿನ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಪತಿ-ಪತ್ನಿ ಹಾಗೂ ಮಗುವನ್ನು ಆಲ್ಟಿಯಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಹಾಗೂ ಎರಡುವರೆ ವರ್ಷದ ಕಂದಮ್ಮ ಮೃತಪಟ್ಟಿದ್ದಾರೆ. ಗಾಯಾಳು ತದೆಯ ಸ್ಥಿತಿಯೂ ಗಂಭೀರವಾಗಿದೆ.
ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಕೆಲಸಗಳು ಚುರುಕುಗೊಂಡಿರುವ ಬೆನ್ನಲ್ಲೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವಕೈಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
*ಶಾಲಾ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯ ಮೇಲೆ ಹರಿದ ಬಸ್; ಸ್ಥಳದಲ್ಲೇ ಬಾಲಕಿ ದುರ್ಮರಣ*
https://pragati.taskdun.com/school-busukg-student-deathfall-down-bus/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ