Latest

*KTF ಕಾರ್ಯಕರ್ತ ಅರ್ಷದೀಪ್ ಸಿಂಗ್ ಗಿಲ್ ಭಯೋತ್ಪಾದಕ: ಕೇಂದ್ರ ಗೃಹ ಸಚಿವಾಲಯ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೆನಡಾ ಮೂಲದ ಗ್ಯಾಂಗ್ ಸ್ಟರ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಕಾರ್ಯಕರ್ತ ಅರ್ಷದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ನನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿದೆ.

ಕೆನಡಾದಲ್ಲಿ ನೆಲೆಸಿರುವ ಅರ್ಷದೀಪ್ ಕೆಟಿಎಫ್ ನೊಂದಿಗೆ ಸಂಬಂಧ ಹೊಂದಿದ್ದಾನೆ. ಉದ್ದೇಶಿತ ಹತ್ಯೆ, ಭಯೋತ್ಪಾದಕರಿಗೆ ಧನಸಹಾಯಕ್ಕಾಗಿ ಹಣ ಸುಲಿಗೆ, ಕೊಲೆಯತ್ನ, ಕೋಮು ಸಾಮರಸ್ಯವನ್ನು ಕದಡುವುದು ಮತ್ತು ಪಂಜಾಬ್ ನ ಜನರಲ್ಲಿ ಭಯದ ವಾತಾವರಣ ನಿರ್ಮಿಸುವುದು ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸಿದ ವಿವಿಧ ಪ್ರಕರಣಗಳಲ್ಲಿ ಅರ್ಷದೀಪ್ ಆರೋಪಿಯಾಗಿದ್ದಾನೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Home add -Advt

ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ಗೆ ಅರ್ಷದೀಪ್ ಆಪ್ತನಾಗಿದ್ದು, ಅವನ ಪರವಾಗಿ ಭಯೋತ್ಪಾದಕ ಕೃತ್ಯಗಲನ್ನು ನಡೆಸುತ್ತಿದ್ದಾನೆ. ಮಾದಕವಸ್ತುಗಳು ಅಥವಾ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿಯೂ ಭಾಗಿಯಾಗಿದ್ದಾನೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

*ಶಾಲಾ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯ ಮೇಲೆ ಹರಿದ ಬಸ್; ಸ್ಥಳದಲ್ಲೇ ಬಾಲಕಿ ದುರ್ಮರಣ*

https://pragati.taskdun.com/school-busukg-student-deathfall-down-bus/

Related Articles

Back to top button