
ಪ್ರಗತಿವಾಹಿನಿ ಸುದ್ದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲಿ ನಡೆದಿದೆ.
ನಾಗೇಶ್ ರೂಗಿ (50) ಮೃತ ವ್ಯಕ್ತಿ. ಹಿಂದೂಜಾ ಮೈಕ್ರೋ ಫೈನಾನ್ಸ್ ನಲ್ಲಿ ನಾಗೇಶ್ 5 ಲಕ್ಷ ಸಾಲ ಪಡೆದಿದ್ದರು. 1 ಲಕ್ಷ 50 ಸಾವಿರ ರೂಪಾಯಿ ಬಾಕಿ ಇತ್ತು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಪದೇ ಪದೇ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೇ ಮನೆಯ ಗೋಡೆಗೆ ಮನೆ ಮಾರಾಟಕ್ಕಿದೆ ಎಂದು ಬರೆದು ಹೋಗಿದ್ದರಂತೆ. ಇದರಿಂದ ತೀವರ್ವಾಗಿ ಮನನೊಂದು ಮನೆಯಲ್ಲಿದ್ದ ನಿದ್ರೆ ಮಾಅತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.