Kannada NewsKarnataka NewsLatestPolitics

ಅಲುಮ್ನಿ ಅಸೋಸಿಯೇಶನ್ ವತಿಯಿಂದ ಮಿಲನ-2020

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಕೆ. ಎಲ್. ಇ ಇಂಜಿನಿಯರಿಂಗ್ ಕಾಲೇಜಿನ ಅಲುಮ್ನಿ ಅಸೋಸಿಯೇಶನ್ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮಿಲನ-೨೦೨೦ ಕಾರ್ಯಕ್ರಮವನ್ನು  ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬೆಂಗಳೂರಿನ ಕೊಡನೆಸ್ಟ್ ಕಂಪನಿಯ ಸಹ-ಸಂಸ್ಥಾಪಕ ಪ್ರಭಾಕರನ್ ಜಿ. ಆಗಮಿಸಿದ್ದರು.

ತಾಂತ್ರಿಕ ವಿದ್ಯಾಭ್ಯಾಸ ಹಾಗೂ ಉದ್ಯಮಕ್ಕೆ ಸಾಕಷ್ಟು ಅಂತರವಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಕಾಲೇಜಿನ ಆಡಳಿತ ಮಂಡಳಿ -ಶಿಕ್ಷಕರು -ಹಳೆಯ ವಿದ್ಯಾರ್ಥಿಗಳು ಶ್ರಮಿಸಬೇಕಾಗಿದೆ. ಇಂಟರ್ನಶಿಪ್‌ಅನ್ನು ಶಿಕ್ಷಕರು ವರ್ಷಕ್ಕೊಮ್ಮೆ ಉದ್ಯಮದಲ್ಲಿ ಪಡೆದುಕೊಳ್ಳಲೂ ಕಾಲೇಜಿನ ಆಡಳಿತ ಮಂಡಳಿ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಉದ್ಯಮದಲ್ಲಿ ತಾರ್ಕಿಕತೆಗೆ ಹೆಚ್ಚು ಮಹತ್ವವಿದ್ದು, ಹಳೆಯ ವಿದ್ಯಾರ್ಥಿಗಳು ತಮ್ಮ ಕಂಪನಿಗೆ ವಹಿಸಿರುವ ಪ್ರಾಜೆಕ್ಟಗಳನ್ನು ಕಾಲೇಜಿನಲ್ಲಿರುವ ಪ್ರಸ್ತುತ ವಿದ್ಯಾರ್ಥಿಗಳಿಗೆ ನೀಡಿ ಅವುಗಳನ್ನು ಪರಿಹರಿಸಬೇಕು. ಯಾವುದೇ ಕಂಪನಿ ಆಯ್ಕೆಮಾಡುವ ಹಂತದಲ್ಲಿ ಕೇವಲ ಮನೋಭಾವ, ಮೂಲಜ್ಞಾನ ಮಾತ್ರ ಪರಿಶೀಲಿಸಲಾಗುವುದು. ವ್ಯಕ್ತಿ ತನ್ನ ಕಾರ್ಯಕ್ಷೇತ್ರದಲ್ಲಿ ಸಾಧಿಸಬೇಕಾದರೆ ತನ್ನ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನವನ್ನು ಬೇರೆ-ಬೇರೆಯಾಗಿಯೇ ಪರಿಗಣಿಸಬೇಕು ಎಂದರಿ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ-
ಹಳೆಯ ವಿದ್ಯಾರ್ಥಿಗಳ ಹಾಗೂ ಮಹಾವಿದ್ಯಾಲಯದ ಸಂಬಂಧವನ್ನು ಮತ್ತಷ್ಟು ಅನ್ಯೊನ್ಯಗೊಳಿಸಲು ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು  ಹಮ್ಮಿಕೊಂಡಿದ್ದೇವೆ. ಹಳೆಯ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಪ್ರಸ್ತುತ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅವರಿಗೆ ಉದ್ಯಮದಲ್ಲಿರುವ ಆಧುನಿಕ ತಂತ್ರಜ್ಞಾನ ಹಾಗೂ ಕಾರ್ಯವೈಖರಿ ಕುರಿತು ಮಾಹಿತಿ ನೀಡಿ ಅವರಿಗೆ ಸ್ಪೂರ್ತಿ ತುಂಬುವ ಕಾರ್ಯವನ್ನು ಮಾಡಬೇಕೆಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳ ಕುರಿತು ಜ್ಞಾನವನ್ನು ನೀಡಲೂ ಇನಕ್ಯೂಬೇಶನ್ ಸೆಂಟರ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ನಾವು ಸ್ಟಾರ್ಟ ಅಪ್ ಕಂಪನಿಗಳನ್ನು ಕಾಲೇಜಿನ ಆವರಣದಲ್ಲಿ ಇನಕ್ಯೂಬೆಶನ್ ಸೆಂಟರ್ ಮುಖಾಂತರ ಸ್ಥಾಪಿಸಲು ಬೇಕಾದ ಎಲ್ಲ ಸೌಕರ್ಯಗಳನ್ನು ನೀಡಲೂ ಸಿದ್ದರಿದ್ದೇವೆ ಎಂದರು.

ಈಗಾಗಲೇ ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದಿದ್ದು, ೧೦೦ ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ  ಸಂದೀಪ ಶಿವರುದ್ರನವರ ಮುಂಬರುವ ದಿನಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕೆಂಬುದನ್ನು ವಿವರಿಸಿದರು.
ಹೆಸರಾಂತ ಕಂಪನಿಗಳ ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಅನಿಲ ತೆಲೆಕ್,  ಅಭಿಷೇಕ ಕುಂಬಾರ,  ಸರಸ್ವತಿ ಹಿರೇಮಠ,  ಮಹಮದ್ ಖಾಲಂದರ ಖಾನ,  ಅಜಯ ಯಾಲವರ,  ವಿನಯ ಕಟಗೇರಿ,  ನಿತಿನ ಕಮತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಭಾಗ ಮುಖ್ಯಸ್ಥರಾದ ಪ್ರೊ. ಸತೀಶ ಭೋಜನ್ನವರ, ಪ್ರೊ. ವಿರಭದ್ರ ಬೂದ್ಯಾಳ, ಪ್ರೊ. ಬಸವರಾಜ ಚೌಕಿಮಠ, ಪ್ರೊ. ಪ್ರದೀಪ ಹೊದ್ಲೂರ, ಡಾ. ರುದ್ರಗೌಡಾ ಪಾಟೀಲ, ಪ್ರೊ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.
ಸಂಯೋಜಕ ಪ್ರೊ. ವಿಜಯ ಹಾಲಪ್ಪನವರ ಸ್ವಾಗತಿಸಿದರು. ಅಶು ಮರಡಿ ಸ್ವಾಗತ ಗೀತೆಯನ್ನು ಹಾಡಿದರು. ಶ್ರೇಯಸ್ ಹಿರೇಮಠ ಅಥಿತಿಯನ್ನು ಪರಿಚಯಿಸಿದರು. ದೀಪಕ ಜುಂಜರವಾಡ ವಂದಿಸಿದರು.
ವಿದ್ಯಾಶ್ರೀ ಮುತ್ತೆಪ್ಪಗೋಳ ಮತ್ತು  ಪ್ರನಾಲಿ ಕಿಂಡಾಲಕರ ನಿರೂಪಿಸಿದರು.
ಕಾಲೇಜಿನ ೧೫೦ ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button