Karnataka NewsLatest

Big Breaking – ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಬ್ರೇಕ್ ; 20ರ ವರೆಗೆ ತಡೆ ಎಂದ ಬಾಲಚಂದ್ರ ಜಾರಕಿಹೊಳಿ

ಹಾಲಿನ ದರ ಪರಿಷ್ಕರಣೆ: ನ. 20 ರ ನಂತರ ತೀರ್ಮಾನ -ಸಿಎಂ

ಪ್ರಗತಿವಾಹಿನಿ ಸುದ್ದಿ, ಕಲಬುರಗಿ (ಸೇಡಂ)  : 
ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಸೋಮವಾರ ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಮಂಗಳವಾರದಿಂದಲೇ ಹಾಲು ಹಾಗೂ ಮೊಸರಿನ ದರ ಏರಿಕೆ ಮಾಡಿ ಸೋಮವಾರ ಮಧ್ಯಾಹ್ನವಷ್ಟೆ ಕೆಎಂಎಫ್ ಆದೇಶ ಹೊರಡಿಸಿತ್ತು.

 ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,  ಮುಖ್ಯಮಂತ್ರಿಗಳು ಫೋನ್ ಮಾಡಿದ್ದರು. 20ರಂದು ಸಭೆ ನಡೆಸಿ ದರ ಏರಿಕೆ ತೀರ್ಮಾನ ಮಾಡೋಣ ಎಂದು ತಿಳಿಸಿದರು. ಆದರೆ ಈಗಾಗಲೆ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಅವರು 20ರ ವರೆಗೆ ಏರಿಕೆ ತಡೆ ಹಿಡಿಯುವಂತೆ ತಿಳಿಸಿದ್ದಾರೆ. ಹಾಗಾಗಿ 20ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೆ ಹೊಸ ದರ ಹಾಲಿನ ಪ್ಯಾಕೆಟ್ ಮೇಲೆ ಮುದ್ರಣವಾಗಿದೆ. ಆದಾಗ್ಯೂ ಮುಖ್ಯಮಂತ್ರಿಗಳು ಹೇಳಿದ್ದರಿಂದ ದರ ಏರಿಕೆ 20ರ ನಂತರವೇ ನಿರ್ಧಾರಿಸಲಾಗುವುದು ಎಂದು ಅವರು ತಿಳಿಸಿದರು.

https://pragati.taskdun.com/milkcurd-pricehikekmfkarnataka/

ಸರಕಾರಕ್ಕೆ ಸೆಡ್ಡು ಹೊಡೆಯಲು KMF ಸಜ್ಜು ; ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಲು ನಿರ್ಧಾರ

https://pragati.taskdun.com/the-price-of-nandini-milk-is-rs-3-increase/

ಏಕರೂಪದ ಹಾಲಿನ ದರಕ್ಕೆ ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

https://pragati.taskdun.com/thought-for-a-uniform-milk-rate-kmf-president-balachandra-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button