Latest

ನಂದಿನಿ ಹಾಲು-ಮೊಸರಿನ ದರದಲ್ಲಿ ಭಾರಿ ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬರೆ ನಡುವೆಯೇ ರಾಜ್ಯದ ಜನತೆಗೆ ಕೆ ಎಂ ಎಫ್ ಮತ್ತೊಂದು ಶಾಕ್ ನೀಡಿದೆ. ರಾಜ್ಯಾದ್ಯಂತ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಹೆಚ್ಚಳ ಮಾಡಿದೆ.

ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ ತಲಾ 3 ರೂಪಾಯಿ ಏರಿಕೆಯಾಗಿದೆ. ಟೋನ್ಡ್ ಹಾಲಿನ ದರ 37ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಸ್ಪೆಷಲ್ ಹಾಲಿನ ದರ 43ರಿಂದ 46 ರೂಪಾಯಿಗೆ ಏರಿಕೆಯಾಗಿದೆ.

ಸಮೃದ್ಧಿ ಹಾಲಿನ ದರ ಲೀ.48ರಿಂದ 51 ರೂಪಾಯಿಗೆ ಹಾಗೂ ಮೊಸರಿನ ದರ ಕೆಜಿ 45ರಿಂದ 48 ರೂಪಾಯಿಗೆ ಹೆಚ್ಚಿಸಿದೆ. ಈ ಹಣವನ್ನು ರೈತರಿಗೆ ಪ್ರೋತ್ಸಾಹ ಧನವನ್ನಾಗಿ ನೀಡಲು ನಿರ್ಧರಿಸಲಾಗಿದೆ. ನಾಳೆಯಿಂದಲೇ ಪರಿಷ್ಕೃತ ಹಾಲಿನ ದರ ಜಾರಿಗೆ ಬರಲಿದೆ.

ಪ್ರಿಯತಮೆಯನ್ನು ಕೊಲೆಗೈದು; 35 ತುಂಡುಗಳನ್ನಾಗಿ ಮಾಡಿದ್ದ ಪ್ರಿಯತಮ; 18 ದಿನಗಳ ಕಾಲ ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ…; ಮುಂದೇನಾಯ್ತು?

https://pragati.taskdun.com/latest/delhi-man-chops-girlfriend35-pieceskeeps-in-fridgedisposes-across-capital-city18-days/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button