ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಾಲು, ಮೊಸರಿನ ದರ ಏರಿಕೆ ಬಿಸಿ ನಡುವೆಯೇ ಇದೀಗ ಗ್ರಾಹಕರಿಗೆ ತುಪ್ಪದ ಬಿಸಿ ತಟ್ಟಿದೆ. ತುಪ್ಪಸೇರಿದಂತೆ ಕೆ ಎಂ ಎಫ್ ತನ್ನ ಇತರ ಉತ್ಪನ್ನಗಳ ದರ ಹೆಚ್ಚಳಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಶಾಕ್ ನೀಡಿದೆ.
ಕಳೆದ ಎರಡು ತಿಂಗಳಲ್ಲಿ ತುಪ್ಪದ ದರ 4 ಬಾರಿ ಹೆಚ್ಚಳ ಮಾಡಲಾಗಿದ್ದು, ಸಧ್ಯ ಒಟ್ಟು 170 ರೂಪಾಯಿವರೆಗೆ ಹೆಚ್ಚಳ ಮಾಡಿದೆ. ತುಪ್ಪ ಮಾತ್ರವಲ್ಲ ಕೆ ಎಂ ಎಫ್ ತನ್ನ ಎಲ್ಲಾ ಉತ್ಪನ್ನಗಳ ದರವೂ ಶೇ.5ರಿಂದ 15ರಷ್ಟು ಏರಿಕೆ ಮಾಡಿದೆ. ತುಪ್ಪದ ದರ 50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ನಲ್ಲಿ ಟೀ, ಕಾಫಿ ದರ ಹೆಚ್ಚಳವಾಗುವ ಆತಂಕ ಗ್ರಾಹಕರಿಗೆ ಎದುರಾಗಿತ್ತು. ಆದರೆ ಈ ವಿಚಾರಕ್ಕೆ ರಿಲೀಫ್ ನೀಡಿರುವ ಹೋಟೆಲ್ ಮಾಲೀಕರ ಸಂಘ, ಹೋಟೆಲ್ ನಲ್ಲಿ ಯಾವುದೇ ದರ ಹೆಚ್ಚಳ ಸಧ್ಯಕ್ಕಿಲ್ಲ ಎಂದು ತಿಳಿಸಿದೆ.
ಕರ್ನಾಟಕ ಬಸ್ ಅಡ್ಡಗಟ್ಟಿ ಪುಂಡಾಟ ಮೆರೆದ ಮರಾಠಿ ಕಾರ್ಯಕರ್ತರು
https://pragati.taskdun.com/karnataka-maharashtra-border-issuekarnataka-busblack-inkmarati-sangha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ