
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮೀಡಿಯಾ ಜಂಕ್ಷನ್ ಸಂಸ್ಥೆ “ನಿನಾದ ಮ್ಯೂಸಿಕ್ ವರ್ಲ್ಡ್” ಲೋಕಾರ್ಪಣೆಗೊಳಿಸಿದೆ.

ಚಲನಚಿತ್ರ ಗೀತೆ, ಹಿನ್ನೆಲೆ ಸಂಗೀತ, ಜನಪದ ಗೀತೆ, ಅಲ್ಬಮ್ ಸಾಂಗ್ಸ್, ಮೂವೀ ವಾಯ್ಸ್ ಡಬ್ಬಿಂಗ್, ಕರೋಕೆ ಸಿಂಗಿಂಗ್ ಸೇರಿದಂತೆ ಹತ್ತಾರು ಸೌಲಭ್ಯಗಳು ಇನ್ಮುಂದೆ ಬೆಳಗಾವಿಯಲ್ಲಿಯೇ ಸಿಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶೇಷ ರೆಕಾರ್ಡಿಂಗ್ ಸ್ಟುಡಿಯೋ ಇದಾಗಿದ್ದು ಈ ಮೂಲಕ ಈ ಭಾಗದ ಜನರ ಬೆಂಗಳೂರು ಅವಲಂಬನೆ ತಪ್ಪಿದಂತಾಗಿದೆ.