ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ರಾಜಕೀಯ ಸೋಮವಾರ ಮತ್ತಷ್ಟು ಕುತೂಹಲಕರ ತಿರುವು ಪಡೆದಿದೆ. ಈಚೆಗಷ್ಟೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ ರಾಜಿನಾಮೆ ಸಲ್ಲಿಸಿ, ತಮ್ ಬೆಂಬಲ ಬಿಜೆಪಿಗೆ ಎಂದು ಘೋಷಿಸಿದ್ದಾರೆ.ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ಸಚಿವಸ್ಥಾನದ ಮತ್ತು ಸಮ್ಮಿಶ್ರ ಸರಕಾರಕ್ಕೆ ಬಂಬಲ ಹಿಂಪಡೆಯುವ ಪತ್ರವನ್ನು ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ ಸಲ್ಲಿಸಿದ್ದಾರೆ. ಸ್ವಲ್ಪ ಹೊತ್ತಿಗೆ ಅವರೂ ಮುಂಬೈ ತಲುಪುವ ಸಾಧ್ಯತೆ ಇದೆ. ಎಚ್. ನಾಗೇಶ್ ಮತ್ತು ರಾಣೆಬೆನ್ನೂರಿನ ಆರ್. ಶಂಕರ್ ಅವರನ್ನು ಸರ್ಕಾರ ಉಳಿಸಿಕೊಳ್ಳುವ ಕಸರತ್ತಿಗಾಗಿ 21 ದಿನಗಳ ಹಿಂದಷ್ಟೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಜೆಡಿಎಸ್ ಕೋಟಾದಲ್ಲಿ ನಾಗೇಶ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಜೂನ್ 14ರಂದು ನಡೆದ ಸಮಾರಂಭದಲ್ಲಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶಂಕರ ಅವರ ನಿಲುವು ಇನ್ನೂ ಗೊತ್ತಾಗಿಲ್ಲ.ಈ ಮಧ್ಯೆ ಕಾಂಗ್ರೆಸ್ ನ ಎಲ್ಲ ಸಚಿವರ ಸಾಮೂಹಿಕ ರಾಜಿನಾಮೆ ಪಡೆಯಲಾಗಿದೆ ಎನ್ನುವ ಮಾಹಿತಿ ಬರುತ್ತಿದೆ. ಇಂದು ಬೆಳಗ್ಗೆ ಉಪಹಾರಕೂಟದ ನೆಪದಲ್ಲಿ ಸೇರಿದ್ದ ಸಂದರ್ಭದಲ್ಲಿ ಎಲ್ಲರಿಂದಲೂ ರಾಜಿನಾಮೆ ಪತ್ರ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ