ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂಡಲಗಾ ಗ್ರಾಮದ ಮಹಾಲಕ್ಷ್ಮಿ ನಗರದ ಆರ್ಮಿ ಕ್ವಾರ್ಟರ್ಸ್ ನ ನೀಲಕಂಠ ವಿಹಾರದಲ್ಲಿ ನೂತನ ಶಿವ ಮಂದಿರ, ಜಯನಗರದಲ್ಲಿ ಶ್ರೀ ಗಣೇಶ ಮಂದಿರ, ಸರಸ್ವತಿ ನಗರದಲ್ಲಿ ಮಾರುತಿ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ, “ಈ ಹಿಂದೆ ಶಾಸಕತ್ವದ ಅವಧಿಯಲ್ಲೂ ಶ್ರದ್ಧಾ ಸ್ಥಾನಗಳ ಅಭಿವೃದ್ಧಿ ನಿರ್ಮಾ ಣ ಕಾರ್ಯಗಳಿಗೆ ಶಕ್ತಿ ಮೀರಿ ಸಹಕಾರ ನೀಡಿದ್ದು ಇನ್ನು ಮುಂದೆಯೂ ಸರ್ವಾಂಗೀಣ ಅಭಿವೃದ್ಧಿಗೆ ಸಂಪೂರ್ಣವಾಗಿ ಸಹಕರಿಸಲಾಗುವುದು” ಎಂದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ವಿಠ್ಠಲ ದೇಸಾಯಿ, ರಾಹುಲ್ ಉರಣಕರ್, ಚೇತನಾ ಅಗಸ್ಗೆಕರ್, ಫಡಕೆ, ಪ್ರವೀಣ ಪಾಟೀಲ, ಸೀಮಾ ದೇವಕರ್, ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಣೇಶಪುರ ಗ್ರಾಮಸ್ಥರಿಂದ ಸನ್ಮಾನ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದಲ್ಲಿ ಅಲ್ಲಿನ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಸತ್ಕರಿಸಿದರು. ಸತ್ಕಾರ ಸ್ವೀಕರಿಸಿದ ಲಕ್ಷ್ಮಿ ಹೆಬ್ಬಾಳಕರ ಅವರು ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿದರು. ಸ್ಥಳೀಯ ಗಣ್ಯರು, ಮುಖಂಡರು, ಮಹಿಳೆಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ