Latest

ನಾಲ್ವರು ಆರೋಪಿಗಳ ಮೇಲೆ ಪೊಲೀಸರ ಗುಂಡಿನ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಪೊಲೀಸರು ನಾಲ್ವರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗೋಪಿ, ಗಂಗಾ, ಅನಂತ, ಬಸವ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಆನೇಕಲ್ ಬಳಿ ನಡೆದಿದ್ದ ವಿನೀತ್ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

Home add -Advt

ಈ ವೇಳೆ ಆರೋಪಿಗಳಾದ ಗೋಪಿ ಹಾಗೂ ಗಂಗಾ ಪಿಸಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ತಕ್ಷಣ ಡಿವೈ ಎಸ್ ಪಿ ಮಹದೇವ್ ಹಾಗೂ ಇನ್ಸ್ ಪೆಕ್ಟರ್ ಕೃಷ್ಣ ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.

ಇದೇ ವೇಳೆ ಮುತ್ಯಾನಲ್ಲೂರಿನಲ್ಲಿ ಇಬ್ಬರು ಕೊಲೆ ಆರೋಪಿಗಳ ಮೆಲ್ ಫೈರಿಂಗ್ ಮಾಡಿರುವ ಪೊಲೀಸರು ಅನಂತ ಹಾಗೂ ಬಸವ ಎಂಬುವವರನ್ನು ಬಂಧಿಸಿದ್ದಾರೆ.

Related Articles

Back to top button