
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನೂತನ ವರ್ಷದ – 2021 ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸದರಿ ಕ್ಯಾಲೆಂಡರ್ ಬುಡಕಟ್ಟು ಜನಾಂಗದ ಬಗ್ಗೆ ವಿವರ ಹಾಗೂ ಜೀವನಶೈಲಿಯನ್ನು ವಿಸ್ತಾರವಾಗಿ ಸೆರೆಹಿಡಿದಿದೆ.
ಇದೇ ವೇಳೆ ಮಾನ್ಯ ಸಚಿವರು ಸಮಾಜ ಕಲ್ಯಾಣ ಇಲಾಖೆಯಿಂದ ವಿನೂತನ ಯೋಜನೆ “ಇಲಾಖೆ ನಡೆ ಹಳ್ಳಿ ಕಡೆ” ಅಭಿಯಾನವನ್ನು ಘೋಷಣೆ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಎಸ್ ಟಿ ಡೈರಕ್ಟರೇಟ್ ಮುಖ್ಯಸ್ಥರು ಇನ್ನು ಮುಂದೆ ಹಳ್ಳಿಗಳಲ್ಲಿ ಕೆಲಸ ಮಾಡಬೇಕು. ಹಂತ ಹಂತವಾಗಿ ಎಲ್ಲಾ ಡಿಪಾರ್ಟ್ ಮೆಂಟ್ ಗಳ ಮುಖ್ಯಸ್ಥರಿಗೆ ವಿಸ್ತರಿಸಲಾಗುವುದು. ತಿಂಗಳಲ್ಲಿ ಎರಡು ದಿನ ಹಾಡಿ ಗಳಲ್ಲಿ, ಹಳ್ಳಿ ಗಳಲ್ಲಿ , ಪರಿಶಿಷ್ಟ ಜಾತಿ, ಪಗದಳು ವಾಸಿಸುವ ಪ್ರದೇಶಗಲ್ಲಿ , ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ಕೆಲ್ಸ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಇನ್ನು ಹಳ್ಳಿಗಳಿಂದ ಆಡಳಿತ ನಡೆಸುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಸರ್ಕಾರ ಎಷ್ಟೇ ಯೋಜನೆಗಳನ್ನ ತಂದರು , ಅದು ಜನರ ಸಾಮಾನ್ಯರಿಗೆ ತಲುಪಿದಾಗ ಅಷ್ಟೇ ಸಾರ್ಥಕವಾಗುತ್ತೆ. ಆದ್ದರಿಂದ ಈ ಪ್ರಯತ್ನ. ರಾಜ್ಯ ಗ್ರಾಮೀಣ ಭಾಗಗಳಲ್ಲಿ ನಮ್ಮ ಭವನಗಳು ಇವೆ. ಸಿಸಿ ರಸ್ತೆ ನಿರ್ಮಾಣ ವಾಗುತ್ತವೆ, ಹಾಸ್ಟೇಲ್ ಗಳಿವೆ, ರೆಸಿಡೆನ್ಶಿಯಲ್ ಶಾಲೆಗಳಿವೆ, ಮೂಲಭೂತ ಸೌಕರ್ಯ ಕೊರತೆ ಇದೆ. ಇದನ್ನೆಲ್ಲಾ ತಿಳಿಯುವುದು, ಹಾಗೂ ಅಡಳಿತಾನ ಅವರ ಮನೆ ಬಾಗಿಲಿಗೆ ಕೊಂಡೊಯ್ಯುವುದು ಇದರ ಉದ್ದೇಶ.
ಅತಿ ಹಿಂದುಳಿದ ಭಾಗಗಳಲ್ಲಿ ದೀನ ದಲಿತರ, ಬಡವರ ಸಮಸ್ಯೆಗಳು ಇನ್ನು ಹಾಗೆ ಇವೆ. ಅದನ್ನು ಅಲ್ಲೇ ಹೋಗಿ ಬಗೆಹರಿಸುವ ನಿಟ್ಟಿನಲ್ಲಿ “ಇಲಾಖೆ ನಡೆ ಹಳ್ಳಿ ಕಡೆ” ಆರಂಭಿಸುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ