Latest

224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರಿಗೆ ಓಪನ್ ಚಾಲೇಂಜ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ರಮೇಶ್ ಕುಮಾರ್ ಸೇರಿದಂತೆ ಎಲ್ಲರ ವಿರುದ್ಧ ತನಿಖೆಯಾಗಲಿ, ಯಾರ ಬಂಡವಾಳ ಏನೆಂಬುದು ರಾಜ್ಯದ ಜನತೆಗೆ ತಿಳಿಯಲಿ ಎಂದು ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಸಿಡಿ ವಿಚಾರವಾಗಿ ಶ್ರೀರಾಮಚಂದ್ರನಂತೆ, ಸತ್ಯಹರಿಶ್ಚಂದ್ರರಂತೆ ಇಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಯಾರೆಲ್ಲ ಮಾತನಾಡುತ್ತಿದ್ದಾರೆ ಅವರೆಲ್ಲರಿಗೂ ಓಪನ್ ಚಾಲೇಂಜ್ ಮಾಡುತ್ತೇನೆ ಸಿದ್ದರಾಮಯ್ಯ,ಡಿಕೆಶಿ, ಕುಮಾರಣ್ಣ, ರಮೇಶ್ ಕುಮಾರ್ ಇವರೆಲ್ಲ ಇವರೆಲ್ಲರೂ ಸತ್ಯ ಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತವನ್ನು ಮಾಡುತ್ತಿದ್ದಾರಾ? ಇವರೆಲ್ಲ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರ ವಿರುದ್ಧ ಮಾತ್ರವಲ್ಲ ನನ್ನನ್ನೂ ಸೇರಿದಂತೆ ಎಲ್ಲಾ 224 ಶಾಸಕರ ವಿರುದ್ಧವೂ ತನಿಖೆಯಾಗಲಿ.

ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದರು? ಯಾರಿಗೆಲ್ಲ ಅನೈತಿಕ ಸಂಬಂಧಗಳಿವೆ? ಯಾರ ವಿಚಾರಏನು ಎಂಬುದು ತನಿಖೆಯಾಗಲಿ. ತನಿಖೆ ಬಳಿಕ ಯಾರ ಬಂಡವಾಳ ಏನು ಎಂಬುದು ಗೊತಾಗಲಿದೆ ಎಂದು ಹೇಳಿದ್ದಾರೆ.

Home add -Advt

Related Articles

Back to top button