Karnataka News
*ಪರೀಕ್ಷೆ ಮುಗಿದರೂ ಸ್ಪೆಷಲ್ ಕ್ಲಾಸ್: ರಜೆ ಇಲ್ಲದೇ ಬೇಸರಗೊಂಡು ಇಬ್ಬರು ವಿದ್ಯಾರ್ಥಿಗಳು ವಸತಿ ಶಾಲೆಯಿಂದ ನಾಪತ್ತೆ: ಹೋಟೆಲ್ ನಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯ ಕಾಂಪೌಂಡ್ ಹಾರಿ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಕೊನೆಗೂ ಪತ್ತೆಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದ ಡಾ.ಅಬ್ದುಲ್ ಕಲಾಂ ವಸತಿ ಶಾಲೆಯ ಇಬ್ಬರು ಮಕ್ಕಳು ಮಾರ್ಚ್ 3ರಿಂದ ನಾಪತ್ತೆಯಾಗಿದ್ದರು. ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್ ಹಾಗೂ ಬೆಂಗಳೂರು ಮೂಲದ ತರುಣ್ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರು. ಪರೀಕ್ಷೆ ಮುಗಿದರೂ ಮುಂದಿನ ತರಗತಿ ಸಿದ್ಧತೆ ಎಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡ ಇಬ್ಬರೂ ಕ್ಲಾಸ್ ಮುಗಿಸಿ ರೂಮಿಗೆ ಬಂದವರು ಕಾಂಪೌಂಡ್ ಹಾರಿ ನಾಪತ್ತೆಯಾಗಿದ್ದರು.
ಶಾಲೆಯ ಕಾಂಪೌಂಡ್ ಹಾರಿದವರೇ 5 ಕಿ.ಮೀ ನಡೆದು ಬಳಿಕ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದು ಮಂಗಳೂರಿಗೆ ಹೊರಟಿದ್ದಾರೆ. ಅಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ತಡರಾತ್ರಿ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.