CrimeKannada NewsKarnataka NewsLatest

*ನಾಪತ್ತೆಯಾಗಿದ್ದ ಮಹಿಳೆ ಲವರ್ ಮನೆಯಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕೆಂದು ಚಿಕ್ಕಮಗಳೂರಿಗೆ ತೆರಳಿದ್ದ ಕುಣಿಗಲ್ ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಮಹಿಳೆ ಕುಣಿಗಲ್ ನಲ್ಲಿ ಆಕೆಯ ಲವರ್ ಮನೆಯಲ್ಲಿ ಪತ್ತೆಯಾಗಿದ್ದಾಳೆ.

ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕಾ (28) ಹಾಸನಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದಳು. ಆದರೆ ಆಕೆ ನಿಗೂಢವಾಗಿ ಕಾಣೆಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಬಳಿ ನಡೆದಿತ್ತು. 

ಮಹಿಳೆ ನಾಪತ್ತೆಯಾಗಿದ್ದ ಸ್ಥಳದಲ್ಲಿ ಆಕೆಯ ಬಟ್ಟೆಗಳು, ಒಳ ಉಡುಪುಗಳು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್‌ ಪತ್ತೆಯಾಗಿತ್ತು. ಇದೆಲ್ಲ ಸುಳಿವುಗಳು ಮಹಿಳೆ ನಾಪತ್ತೆಯೊಂದಿಗೆ ಕೊಲೆಯಾಗಿರುವ ಆತಂಕವನ್ನು ಹೆಚ್ಚಿಸಿತ್ತು. ಆಕೆಯನ್ನು ಯಾರೋ ಕೊಲೆ ಮಾಡಿ ಸಮೀಪದಲ್ಲಿರುವ ಕೆರೆಗೆ ಶವ ಎಸೆದಿರುವ ಅನುಮಾನವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕುಣಿಗಲ್​​ನ ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರಿಗೆ ಸ್ಥಳೀಯ ಪೊಲೀಸರು ಕೂಡ ಈ ವೇಳೆ ಸಾಥ್​ ನೀಡಿದ್ದಾರೆ. ಡೇವಿಡ್​​ ಮನೆಯಲ್ಲಿಯೇ ಪ್ರಿಯಾಂಕಾ ಎರಡು ದಿನಗಳಿಂದ ವಾಸವಿದ್ದರು ಎನ್ನಲಾಗಿದೆ.

Home add -Advt

ಆದರೆ ಇದೀಗ ಮಹಿಳೆ ಕುಣಿಗಲ್‌ನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಮಹಿಳೆ ಜೀವಂತವಾಗಿ ಇರುವುದನ್ನು ಪೊಲೀಸರು ಖಾತ್ರಿಪಡಿಸಿಕೊಂಡಿದ್ದಾರೆ.

Related Articles

Back to top button