*ರಾಜ್ಯೋತ್ಸವದ ಹಣ ದುರ್ಬಳಕೆ: ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿದ ಹೋರಾಟಗಾರರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 70 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದ 50 ಲಕ್ಷ ರೂ. ಅನುದಾನದ ದುರ್ಬಳಕೆಯ ವಿಚಾರಣೆಯನ್ನು ಆರಂಭಿಸಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕನ್ನಡ ಪರ ಹೋರಾಟಗಾರರು ಭೇಟಿ ಮಾಡಿದರು.
ಪ್ರಾದೇಶಿಕ ಆಯುಕ್ತೆ ಕೆ ಎಮ್. ಜಾನಕಿ ಅವರ ಎದುರು ಕನ್ನಡ ಸಂಘಟನೆಗಳ ಪ್ರಮುಖರು ಶನಿವಾರ ಭೇಟಿ ಮಾಡಿ ಸಮಗ್ರ ವಿವರಗಳನ್ನು ಒದಗಿಸಿದರು.
ದುರ್ಬಳಕೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರಕಾರ ಪ್ರಾದೇಶಿಕ ಆಯುಕ್ತರಿಗೆ ಕೋರಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧಕ್ಷ ಮಹಾದೇವ ತಳವಾರ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳುಕರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧಕ್ಷ ಬಲರಾಮ ಮಾಸೇನಾಟ್ಟಿ, ಬಾಳಪ್ಪ ಗುಡಗೇನಟ್ಟಿ, ನಾಗೇಶ ಕೊಪ್ಪರ, ಶರೀಫ್ ಸನದಿ, ಈಶ್ವರಗೌಡ ಪಾಟೀಲ್, ಸಿದ್ದಲಿಂಗಪ್ಪ ಸುನಕುಪ್ಪಿ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


