
ಪ್ರಗತಿವಾಹಿನಿ ಸುದ್ದಿ: ಸಿಮೆಂಟ್ ಮಿಕ್ಸರ್ ಲಾರಿ ಮನೆಗೆ ಡಿಕ್ಕಿಯಾದ ಕಾರಣ ಒಂದು ವರ್ಷದ ಎಂಟು ತಿಂಗಳಿನ ಮಗು ಪ್ರಣವ್ ಬಲಿಯಾಗಿದ್ದಾನೆ.
ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮನೆ ಪಕ್ಕದ ವಿದ್ಯುತ್ ಕಂಬ ಹಾಗೂ ವೈರ್ ಗೆ ಡಿಕ್ಕಿ ಹೊಡೆದಿದ್ದು, ನೋಡನೋಡ್ತಿದ್ದಂತೆ ದುರಂತ ಸಂಭವಿಸಿದೆ.
ಸಿಮೆಂಟ್ ಮಿಕ್ಸರ್ ವಿದ್ಯುತ್ ತಂತಿಗೆ ಟಚ್ ಆಗಿದ್ದು, ವಿದ್ಯುತ್ ಕಂಬ ಮನೆಯ ಮೇಲೆ ಬಿದ್ದಿದೆ. ವೈರಿಂಗ್ ಕಂಬ ಕಿತ್ತು ಬಂದು ಮನೆ ಗೋಡೆ ಕುಸಿದಿದೆ. ಆಟ ಆಡುತ್ತಿದ್ದ ಮಗು ಮೇಲೆ ಮನೆಯ ಗೋಡೆಯ ಅವಶೇಷಗಳು ಬಿದ್ದಿದೆ ಇದ್ರಿಂದ ಸ್ಥಳದಲ್ಲಿಯೇ ಪ್ರಣವ್ ಸಾವನ್ನಪ್ಪಿದ್ದಾನೆ.
ಘಟನೆ ಬಳಿಕ ಕಾಂಕ್ರೀಟ್ ಮಿಕ್ಸರ್ ಚಾಲಕ ಪರಾರಿಯಾಗಿದ್ದಾನೆ. ಸಿಮೆಂಟ್ ಮಿಕ್ಸರ್ ಡ್ರೈವರ್ ಪತ್ತೆಗೆ ಡ್ರೈವರ್ ಬಲೆ ಬೀಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.



