
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಸ್ತೆ ಒಳ ಚರಂಡಿ, ಗಟಾರ ಇಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದ ಬೆಳಗಾವಿಯ ಶಾಸ್ತ್ರ ನಗರದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಭಾನುವಾರ ಮುಂಜಾನೆ ಚಾಲನೆ ನೀಡಿದರು.

ಮೊದಲನೆಯ ಹಂತದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಹಾಗೂ ಎರಡನೆಯ ಹಂತದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಾಸ್ತ್ರೀನಗರ, ಗೂಡಶೇಡ್ ರೋಡ್, ಅಟ್ಲೆಚಾಳ, ಹುಲಬತ್ತಿ ಕಾಲನಿ ಪರಿಸರ, ಮಹಾದ್ವಾರ ರೋಡ್, ಕಪಿಲೇಶ್ವರ ಕಾಲನಿ ಭಾಗದಲ್ಲಿ ಪೇವರ್ಸ ರೋಡ್, ಕಾಂಕ್ರೀಟ್ ರಸ್ತೆ, ಗಟಾರ, ಒಳಚರಂಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ