
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ವಾಜಪೇಯಿ ಮಾರ್ಗದ ಮಹಾವೀರ ಭವನ ಕ್ರಾಸ್ ನಿಂದ ಗುರುದೇವ ರಾನಡೆ ಮಂದಿರ, ಭಗತಸಿಂಗ್ ಗಾರ್ಡನ್, ಮೇಗದೂತ್ ಸೊಸೈಟಿ ಹೌಸಿಂಗ್ ಮಾರ್ಗವಾಗಿ ಶಹಾಪುರ ಪೋಲಿಸ್ ಠಾಣೆ ಮುಖ್ಯ ರಸ್ತೆಗೆ ಜೋಡಿಸುವ ಕಾಮಗಾರಿ ಇದಾಗಿದೆ.
ಇದರಿಂದಾಗಿ ಹಿಂದವಾಡಿ, ಟಿಳಕವಾಡಿ, ಶಹಾಪುರ, ವಡಗಾವಿ ಜನರ ಬಹುವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಅತ್ಯಂತ ಎತ್ತರದ ಪ್ರದೇಶವಾಗಿದ್ದರಿಂದ ಇಲ್ಲಿ ಪದೇ ಪದೆ ಮಳಿಯಿಂದಾಗಿ ರಸ್ತೆ ಹಾಳಾಗುತ್ತಿತ್ತು. ಈಗ ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜೊತೆಗೆ ಈ ಶಾರ್ಟ್ ಕಟ್ ರಸ್ತೆಯಿಂದಾಗಿ ಸಮಯ, ಹಣ ಮತ್ತು ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅಭಯ ಪಾಟೀಲ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ