
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕಳೆದ ರಾತ್ರಿ ಬೀಮ್ಸ್ ಅವ್ಯವಸ್ಥೆಗೆ ನೊಂದುಕೊಂಡು ಮಾಜಿ ಮೇಯರಾದ ವಿಜಯ ಮೋರೆರವರು ಪ್ರತಿಭಟನೆ ನಡೆಸಿ ಧರಣಿ ನಿರತರಾಗಿದ್ದಾಗ ವಿಷಯವನ್ನು ತಿಳಿದು ಸ್ಥಳಕ್ಕೆ ಧಾವಿಸಿ ಬೀಮ್ಸನ ನಿರ್ದೇಶಕರಾದ ಕಳಸದ ಅವರನ್ನು ಸ್ಥಳಕ್ಕೆ ಕರೆಸಿ ಗ್ರೂಪ್ ಡಿ ನೌಕರರ ವ್ಯವಸ್ಥೆ ಬಗ್ಗೆ ಹಾಗೂ ಅವರ ಕುಂದುಕೊರತೆಗಳನ್ನು ಹಾಗೂ ಅವರ ಗೈರು ಹಾಜರಾತಿಯನ್ನು ಪ್ರಶ್ನಿಸಿದರು.
ತದನಂತರ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಬೀಮ್ಸನ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಯಿತು.
ತದನಂತರ ಜಿಲ್ಲಾ ಆಸ್ಪತ್ರೆಯ ಪೂರ್ವ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು, ಮಳೆಯ ಪ್ರಭಾವದಿಂದ ಸಂಕಸ್ಟಕ್ಕೆ ಒಳಗಾದ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕಾಗಿ ಆದೇಶಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ