Kannada NewsKarnataka NewsLatest

ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ಪೂರೈಕೆ; ಇಂಧನ ಅಭಾವವಿಲ್ಲ

ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ಪೂರೈಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರಿಗೆ ಆಹಾರ ಪೊಟ್ಟಣಗಳ ಜತೆ ಬಾಟಲ್ ಗಳ ಬದಲಿಗೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಕುಡಿಯುವ ಶುದ್ಧ ನೀರು ತುಂಬಿಸಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

Home add -Advt

ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳ ಜತೆ ನೀರಿನ ಬಾಟಲ್ ಗಳನ್ನು ವಿತರಿಸಲಾಗುತ್ತಿತ್ತು. ಬಾಟಲ್ ಭಾರವಾಗಿರುವುದರಿಂದ ಮೇಲಿನಿಂದ ಎಸೆದಾಗ ಜನರಿಗೆ ಗಾಯಗಳಾಗುವ ಸಾಧ್ಯತೆಗಳು ಕಂಡುಬಂದವು. ಆದ್ದರಿಂದ ಬಾಟಲ್ ಗಳ ಬದಲು ಪ್ಯಾಕೆಟ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ.

ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ತುರ್ತಾಗಿ ಕುಡಿಯುವ ನೀರು ಪೂರೈಸುವ ಅಗತ್ಯವಿದೆ. ಆದ್ದರಿಂದ ಈಗಾಗಲೇ ಲಭ್ಯವಿರುವ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಶುದ್ಧ ನೀರನ್ನು ತುಂಬಿಸಿ ಹೆಲಿಕಾಪ್ಟರ್ ಮೂಲಕ ನೀಡಲಾಗುತ್ತಿದೆ.
ನಂದಿನಿ ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ತುಂಬಿಸಿಕೊಡುತ್ತಿರುವ ಬಗ್ಗೆ ತಪ್ಪು ಮಾಹಿತಿ ಹೋಗದಿರಲಿ ಎಂಬ ಕಾರಣಕ್ಕೆ ಈ ವಿಷಯ ಸ್ಪಷ್ಟಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂಧನ ಅಭಾವ ಇಲ್ಲ

ಇದೇ ವೇಳೆ, ಬೆಳಗಾವಿಯಲ್ಲಿ ಪೆಟ್ರೋಲ್, ಡಿಸೆಲ್, ಗ್ಯಾಸ್ ಸಿಲಿಂಡರ್ ಅಭಾವ ಇಲ್ಲ. ಈ ಸಂಬಂಧದ ವದಂತಿಯನ್ನು ನಂಬಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ವದಂತಿ ಹಬ್ಬುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.

Related Articles

Back to top button