Latest

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ; ಇಂದು ಮಹತ್ವದ ವಿಚಾರಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್ ಗಳಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಹೈಕೋರ್ಟ್ ಗೆ ಪ್ರಕರಣದ ಸ್ಟೇಟಸ್ ಬಗ್ಗೆ ವರದಿ ಸಲ್ಲಿಸಲಿದೆ. ಮೂರೂ ಎಫ್ ಐಆರ್ ಬಗ್ಗೆ ಮಾಹಿತಿ ನೀಡಲಿದೆ.

ಇನ್ನೊಂದೆಡೆ ಪ್ರಕರಣದ ಕಿಂಗ್ ಪಿನ್ ಗಳು ಎನ್ನಲಾದ ನರೇಶ್ ಹಾಗೂ ಶ್ರವಣ್ ಜಾಮೀನು ಅರ್ಜಿ ಭವಿಷ್ಯ ಕೂಡ ಇಂದು ನಿರ್ಧಾರವಾಗಲಿದೆ. ರಮೇಶ್ ಜಾರಕಿಹೊಳಿ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಸಿಡಿ ಕೇಸ್ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಎಸ್ ಐಟಿ ಇಂದು ಆಕ್ಷೇಪಣೆ ಸಲ್ಲಿಸಲಿದೆ.

ಸಿಡಿ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದ್ದು, ನ್ಯಾಯಾಲಯದ ವಿಚಾರಣೆ ಯಾವರೀತಿಯಲ್ಲಿ ಸಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಆರಂಭದಲ್ಲಿ ರಮೇಶ ಜಾರಕಿಹೊಳಿ ಇದೊಂದು ನಕಲಿ ಸಿಡಿ  ಎಂದಿದ್ದವರು ನಂತರದಲ್ಲಿ ಸಿಡಿಯಲ್ಲಿದ್ದವನು ನಾನೇ, ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.

Home add -Advt

ಹಾಗಾಗಿ ಮೊದಲು ಸಿಡಿಯ ಅಸಲಿತನದ ಕುರಿತು ವಿಚಾರಣೆ ಆರಂಭಿಸಿದ್ದ ಎಸ್ಐಟಿ ನಂತರ ತನ್ನ ವಿಚಾರಣೆಯ ದಿಕ್ಕನ್ನೇ ಬದಲಿಸಬೇಕಾಯಿತು. ಹನಿಟ್ರ್ಯಾಪ್ ಆ್ಯಂಗಲ್ ಮೇಲೆ ವಿಚಾರಣೆ ನಡೆಸಬೇಕಾಯಿತು. ಹನಿಟ್ರ್ಯಾಪ್ ಆಗಿದ್ದರೆ ಅದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವ ಕುರಿತೂ ತನಿಖೆ ನಡೆಯುತ್ತಿದೆ.

ಮಾಜಿ ಸಚಿವರೊಬ್ಬರು ತಮ್ಮ ಹೇಳಿಕೆಯನ್ನು ಬದಲಿಸಿರುವ ವಿಷಯ ಕೂಡ ಗಂಭೀರವಾಗಿದೆ. ಅವರು ಆರಂಭದಲ್ಲೇ ಸಿಡಿ ನಕಲಿ ಎಂದು ವಾದಿಸುವ ಬದಲು ಇದೊಂದು ಹನಿಟ್ರ್ಯಾಪ್ ಎಂದು ದೂರು ನೀಡಿದ್ದರೆ ಇಡೀ ಪ್ರಕರಣ ಹೊಸದಿಕ್ಕು ಪಡೆಯುತ್ತಿತ್ತು.

ಈ ಮಧ್ಯೆ ಕಾಂಗ್ರೆಸ್ ರಮೇಶ ಜಾರಕಿಹೊಳಿ ಅವರನ್ನು ಬಂಧಿಸಬೇಕೆಂದು ಪಟ್ಟುಹಿಡಿದಿದೆ. ಅವರು ಗೃಹಸಚಿವರನ್ನು ಭೇಟಿ ಮಾಡಿರುವ ಕುರಿತೂ ಆಕ್ಷೇಪಿಸಿದೆ. ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಹಾಗೂ ತಮ್ಮ ತಂದೆಯವರ ಇಮೇಜ್ ಗೆ ದಕ್ಕೆ ತಂದುಕೊಳ್ಳುವಂತಹ ಕೆಲಸ ಮಾಡಬಾರದೆಂದು ಕಾಂಗ್ರೆಸ್ ಕಟುಕಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ ಮೇಟಿ ಪ್ರಕರಣ ಮುಚ್ಚಿ ಹಾಕಿರುವ ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ ಎಂದಿದ್ದಾರೆ.

ಒಟ್ಟಾರೆ ಸಿಡಿ ಪ್ರಕರಣ ಮುಂದಿನ ದಿನಗಳಲ್ಲಿ ಯಾವದಿಕ್ಕಿನಲ್ಲಿ ಸಾಗಲಿದೆ, ರಾಜ್ಯ ರಾಜಕೀಯದಲ್ಲಿ ಏನೇನು ಬದಲಾವಣೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಿಡಿ ಕೇಸ್ ಗೆ ಟ್ವಿಸ್ಟ್; ಅವನು ನಾನೇ ಎಂದ ರಮೇಶ್ ಜಾರಕಿಹೊಳಿ ?

 

Related Articles

Back to top button