Kannada NewsKarnataka News
ಶಾಲಾ ಕೊಠಡಿ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸೋಮನಟ್ಟಿ, ಭೀಮಗಡ, ಕರಿಕಟ್ಟಿ ಹಾಗೂ ಸಿದ್ದನಹಳ್ಳಿ ಗ್ರಾಮಗಳಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಿಸಿಣ - ಕುಂಕುಮ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸೋಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿಯ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಹ ನೆರವೇರಿಸಿದರು.ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಮಹಿಳೆಯರು, ಕೊಳ್ಳೆಪ್ಪ ನಂದ್ಯಾಗೋಳ, ಮಂಜುನಾಥ್ ಪೂಜೇರಿ, ಟೋಪಣ್ಣ ಪೂಜೇರಿ, ಶೇಖರ್ ಹೊಸೂರಿ, ರಾಮೇಶಿ ನಿಟ್ಟೂರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
https://pragati.taskdun.com/mysorecheetamarashatti-village/
https://pragati.taskdun.com/21-products-sanctioned-under-one-district-one-product-scheem/




