



ವಿವಿಧೆಡೆ ಶ್ರೀರಾಮ ನವಮಿ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಡಾಲ ಅಂಕಲಗಿ ಗ್ರಾಮದ ಶ್ರೀ ರಾಚಯ್ಯ ಅಜ್ಜನವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶ್ರೀ ರಾಮನವಮಿಯ ಅಂಗವಾಗಿ ಶ್ರೀರಾಮನ ಪುಟ್ಟ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗಿದರು.
ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗುವ ವಾಡಿಕೆ ಗ್ರಾಮದಲ್ಲಿ ತಲತಲಾಂತರದಿಂದ ನಡೆದು ಬಂದಿದೆ.
ಇದಾದ ನಂತರ ಶ್ರೀ ಮಾಳಿಂಗರಾಯನ ಜಾತ್ರಾ ಮಹೋತ್ಸವಲ್ಲಿಯೂ ಭಾಗಿಯಾದ ಲಕ್ಷ್ಮಿ ಹೆಬ್ಬಾಳಕರ್, ನೂತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸಿದ್ದಪ್ಪ ಚಾಪಗಾಂವಿ, ಬಸವಂತ ನಾಯಕ, ಪಿಂಟು ಹಳೇಮನಿ, ಮೃಣಾಲ ಹೆಬ್ಬಾಳಕರ್, ವಿಠ್ಠಲ ಅರ್ಜುನವಾಡಿ, ಮೃತ್ಯುಂಜಯ ಹಿರೇಮಠ, ರಾಮ ಪಾಟೀಲ, ಮಂಜು ಅಕ್ಕನ್ನವರ, ಪಿಂಟು ಗಾವಡೆ, ರಮೇಶ ಅರ್ಜುನವಾಡಿ, ರುದ್ರಪ್ಪ ಅರಳೀಕಟ್ಟಿ, ರಮೇಶ ಪುಲಾರಕೊಪ್ಪ, ರಾಮಯ್ಯ ಗಣಾಚಾರಿ, ಶಿವು ಚಾಪಗಾಂವಿ, ಪ್ರಶಾಂತ ಹಟ್ಟಿ, ಪ್ರಥಮೇಶ ಹಳೇಮನಿ, ರಮೇಶ ಕುರಿಗಾರ, ವಿಠ್ಠಲ ಗುಡದೂರ, ವಿನಯ ಕುರುಬರ, ಮಾಳೇಶ ಕುರುಬರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮಸ್ಥರಿಂದ ಸನ್ಮಾನ
ಶ್ರೀ ರಾಮ ನವಮಿಯ ಅಂಗವಾಗಿ ಕಂಗ್ರಾಳಿ ಬಿಕೆ ಗ್ರಾಮದ ಶ್ರೀ ಸಾಯಿ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಹಾಪುರುಷ ಶ್ರೀರಾಮನ ಭಾವಚಿತ್ರಕ್ಕೆ ಗೌರವವನ್ನು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ