ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ – ಕುಟುಂಬ ಸಮೇತ ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವುದರ ಮೂಲಕ ಶಾಸಕ ಮಹಾಂತೇಶ ದೊಡಗೌಡರ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಕೊಂಡಿದ್ದಾರೆ.
ಕೊರೋನಾ ಹಾವಳಿಯಿಂದ ದೇಶವೆ ತತ್ತರಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಮನೆಯಲ್ಲಿ ಇದ್ದು ಶುಭ ಹಾರೈಸಲು ಕರೆ ನೀಡಿದ್ದರು. ಆದರಿಂದ ಶಾಸಕ ಮಹಾಂತೇಶ ದೊಡಗೌಡರ 47ನೇ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಹೋಗಿ ಶಾಸಕ ಮಹಾಂತೇಶ ದೊಡ್ಡಗೌಡರ ಹೆಸರಿನಲ್ಲಿ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿದರು.
ಶಾಸಕರು ಅಭಿಮಾನಿಗಳಿಗೆ ಮನೆಯಲ್ಲಿ ಇದ್ದು ಶುಭ ಹಾರೈಸಲು ಕರೆ ನೀಡಿದ್ದರು. ಆದರೂ ಅಭಿಮಾನಿಗಳು, ಕಾರ್ಯಕರ್ತರು ಹಿತೈಷಿಗಳು ಹುಟ್ಟು ಹಬ್ಬ ಆಚರಣೆಗೆ ಶಾಸಕರ ಕಚೇರಿಗೆ ತಂಡೋಪ ತಂಡವಾಗಿ ಶುಭಾಶಯ ಕೋರಲು ಆಗಮಿಸಿದರು. ಶಾಸಕರು ದೇವಸ್ಥಾನಕ್ಕೆ ಹೋಗಿದ್ದ ಕಾರಣ ಅಭಿಮಾನಿಗಳು ವಾಪಾಸಾದರು.
ಕಿತ್ತೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶಾಸಕರ 47 ನೇ ಜನ್ಮದಿನವನ್ನು ಅವರ ಅಭಿಮಾನಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶ್ರೀ ವೀರಭದ್ರೇಶ್ವರ ದೇವರ ಸನ್ನಿಧಿಯಲ್ಲ್ಲಿ ಶಾಸಕರ ಹೆಸರಿನಲ್ಲಿ ಪೂಜೆ, ಮಹಾಮಂಗಳಾರತಿ, ಅಭಿಷೇಕ ನೇರವೇರಿಸಿ ಆಶೀರ್ವಾದ ಪಡೆದುಕೊಂಡರು.
ಜಿಲ್ಲಾ ಗ್ರಾಮೀಣ ಬಿಜೆಪಿ ಉಪಾಧ್ಯಕ್ಷ ಸಂದೀಪ ದೇಶಪಾಂಡೆ, ಪಪಂ ಸದಸ್ಯರಾದ ಹನಮಂತ ಲಂಗೋಟಿ, ಕಿರಣ ಪಾಟೀಲ, ಮಂಜುನಾಥ ದೊಡಮನಿ, ಮಹಾಂತೇಶ ನಾಗಲಾಪೂರ, ಮಹಾಂತೇಶ ಮಾತನ್ನವರ, ನವೀಣ ಪಟ್ಟಣಶೆಟ್ಟಿ, ಪಾಪು ನರಗುಂದ, ಶಂಕರ ಗುರುಪುತ್ರ ಸೇರಿದಂತೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ