
ಪ್ರಗತಿವಾಹಿನಿ ಸುದ್ದಿ, ಕಿತ್ತೂರು- ಕಿತ್ತೂರಿನ ಟಿ.ಎ.ಪಿ.ಸಿ.ಎಮ್.ಎಸ್. ಕಟ್ಟಡದಲ್ಲಿ ಕಿತ್ತೂರು ಮತ ಕ್ಷೇತ್ರದ ಶಾಸಕ ಮಹಾಂತೇಶ ಬ ದೊಡ್ಡಗೌಡರ್ ಕಿತ್ತೂರು ತಾಲೂಕಿಗೆ ನೂತನವಾಗಿ ಮಂಜೂರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಾಲೂಕಾ ಕಛೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿಜಲಿಂಗಯ್ಯ ಹಿರೇಮಠ, ಚನ್ನಬಸಪ್ಪ ಮೊಕಾಶಿ, ಬಸವರಾಜ ಪರವನ್ನವರ, ಉಳವಪ್ಪ ಉಳ್ಳಾಗಡ್ಡಿ, ಎಸ್.ಆರ್ ಪಾಟೀಲ, ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮನಿ, ಕಿರಣ್ ಪಾಟೀಲ, ಮಡಿವಾಳಯ್ಯ ಖೋದಾನಪುರ, ಬಸಪ್ಪ ಕಾದ್ರೊಳ್ಳಿ, ಸರಸ್ವತಿ ಹೈಬತ್ತಿ, ರೇವತಿ ಹೊಸಮಠ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕು ಸ್ಥಾನಮಾನ ಪಡೆದ ನಂತರ ಕಿತ್ತೂರಿಗೆ ಒಂದೊಂದೇ ಕಚೇರಿಗಳು ಬರುತ್ತಿದ್ದು, ಇನ್ನೂ ಸಂಪೂರ್ಣ ತಾಲೂಕಾಗಿ ಪರಿವರ್ತನೆಯಾಗಬೇಕಿದೆ.
ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ; ಬಾರಪ್ಪ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ವಿಜಯೇಂದ್ರಗೂ ಸೂಚಿಸಿದ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ