Belagavi NewsBelgaum NewsKannada NewsKarnataka NewsPolitics

*ಯೋಗ ದಿನಾಚರಣೆಗೆ ಶಾಸಕಿ ಶಶಿಕಲಾ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಪ್ಪಾಣಿ ತಾಲೂಕಾ ಆಡಳಿತ ಮತ್ತು ಜೊಲ್ಲೆ ಗ್ರೂಪ್ ಸಂಯುಕ್ತಾಶ್ರಯದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಯೋಗ ದಿನಾಚರಣೆಗೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. 

ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಜೀವನ ನಡೆಸಬೇಕೆಂಬ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರೂ ವ್ಯಾಯಾಮದ ಕೊರತೆ ಮತ್ತು ಹೆಚ್ಚುತ್ತಿರುವ ಒತ್ತಡದಿಂದಾಗಿ ಆರೋಗ್ಯದ ದೂರುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿರುವುದರಿಂದ ವಿವಿಧ ರೋಗಗಳಿಂದ ಸಮಾಜ ಬಳಲುತ್ತಿದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಜಗತ್ತಿಗೆ ಭಾರತ ದೇಶ ಯೋಗ ಮತ್ತು ಪ್ರಾಣಾಯಾಮವನ್ನು ಪರಿಚಯಿಸಿದೆ. ದೇಶ, ವಿದೇಶದ ಜನರು ಯೋಗದ ಮಹತ್ವಗಳನ್ನು ಅರಿತು ಪ್ರಸ್ತುತ ತಮ್ಮ ಜೀವನದಲ್ಲಿ ಯೋಗ- ಪ್ರಾಣಾಯಾಮ ಅಳವಡಿಸಿಕೊಳ್ಳಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು.

10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೊಲ್ಲೆ ಗ್ರೂಪ್ ಹಾಗೂ ತಾಲೂಕಾ ಆಡಳಿತದಿಂದ ನಗರದ ಶ್ರೀಪೇವಾಡಿ ರಸ್ತೆಯಲ್ಲಿರುವ ಜೊಲ್ಲೆ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಉತ್ತಮ ಆರೋಗ್ಯಕ್ಕಾಗಿ ಭಾರತೀಯ ಸಂಸ್ಕಂತಿ  ಇಡಿ ವಿಶ್ವಕ್ಕೆ ಧ್ಯಾನ, ಯೋಗ, ಆಯುರ್ವೇದ, ಮೊದಲಾದ ಅಪಾರ ಕೊಡುಗೆಗಳನ್ನು ನೀಡುತ್ತ ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ಋಷಿಮುನಿಗಳು ಯೋಗ ಮತ್ತುಆಯುರ್ವೇದ ಜಗತ್ತಿನ ಗಮನ ಸೆಳೆದರೂ ನಾವು ಅದನ್ನು ನಿರ್ಲಕ್ಷಿಸುತ್ತಿದ್ದೇವು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಯೋಗ ಮತ್ತು ಆಯುರ್ವೇದವನ್ನು ಉತ್ತೇಜಿಸಲು ಜೂ.21ರ ದಿನವನ್ನು ವಿಶ್ವಯೋಗ ದಿನ ಎಂದು ಘೋಷಿಸಿದರು. 

ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ಪ್ರತಿಯೊಬ್ಬರಿಗೂ ಯೋಗದ ಅಗತ್ಯವಿದೆ. ಎಲ್ಲರೂ ಬೆಳಗ್ಗೆ ಯೋಗಕ್ಕೆ ಅರ್ಧಗಂಟೆ ಸಮಯ ಕೊಟ್ಟರೆ ದೇಹದ ಅನೇಕ ರೋಗಗಳನ್ನು ತಡೆಗಟ್ಬಬಹುದು. ಒತ್ತಡ ಮತ್ತು ಸಮರ್ಪಕ ಆಹಾರದ ಕೊರತೆಯಿಂದ ಹೆಚ್ಚಿದ ಎಲ್ಲಾ ಕಾಯಿಲೆಗಳ ನಿವಾರಣೆಗೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಅವಶ್ಯಕತೆ ಜಗತ್ತಿಗೆ ಇದೆ ಎಂದರು,

ಪತಂಜಲಿ ಯೋಗ ಸಮಿತಿಯ ರಾಮದೇವ್ ಬಾಬಾ ಅವರು ಯೋಗ ಮತ್ತು ಪ್ರಾಣಾಯಾಮವನ್ನು ದೇಶದಲ್ಲಿ ಪ್ರಚಾರ ಮಾಡಿದರು. ಯೋಗ ಮತ್ತು ಪ್ರಾಣಾಯಾಮವನ್ನು ದೈನಂದಿನ ಜೀವನದಲ್ಲಿ ಹೇಗೆ ಬಳಸುವುದು, ಆರೋಗ್ಯಕ್ಕೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಗಾಗಿ ಯೋಗ ಮತ್ತು ಪ್ರಾಣಾಯಾಮವನ್ನು ಮಾಡಬೇಕು ಎಂದು ಹೇಳಿದರು

ಪತಂಜಲಿ ಯೋಗ ಸಮಿತಿ ನಿಪ್ಪಾಣಿಯ ಯೋಗಗುರು ದಶರಥ್‍ ಕುಂಬಾರ, ಜೆ.ಡಿ. ಶಿಂಧೆ, ಶಂಕರ ಹಿರೇಮಠ, ಆಶಾ ತಿಳವೆ ಅವರು ಯೋಗ ಮತ್ತು ಪ್ರಾಣಾಯಾಮದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಾರ್ಗದರ್ಶನ ನೀಡಿದರು. ಆರೋಗ್ಯಕ್ಕಾಗಿ ಯೋಗ ಮತ್ತು ಪ್ರಾಣಾಯಾಮ ಸಾಧನಾ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ  ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಜಯವಂತ ಭಾಟಲೆ, ರಾಜು ಗುಂದೇಶಾ, ಸಿಪಿಐ ಬಿ.ಎಸ್. ತಳವಾರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ, ಅನಿತಾ ರಾಥೋಡ್, ಡಿ.ಬಿ. ಕೋತ್ವಾಲ್, ಹೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಚೌಗುಲೆ, ಕಾವೇರಿ ಮಿರ್ಜೆ, ವಿನಾಯಕ ಶಿಪ್ಪೂರೆ, ಮೊದಲಾದವರು ಸೇರಿದಂತೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತಹಸೀಲ್ದಾರ ಮುಜಫ್ಫರ್ ಬಳಿಗಾರ ಸ್ವಾಗತಿಸಿದರು. ಪ್ರಶಾಂತ ರಾಮನಕಟ್ಟಿ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button