Kannada NewsKarnataka NewsLatest

*ಕುಸಿದು ಬಿದ್ದ ಶಾಸಕ ಶರಣು ಸಲಗಾರ*

ಪ್ರಗತಿವಾಹಿನಿ ಸುದ್ದಿ: ಬೀದರ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗಾರ ಅವರು ಕುಸಿದು ಬಿದ್ದಿರುವ ಘಟನೆ ಇಂದು ನಡೆದಿದೆ.

ಬಸವಕಲ್ಯಾಣ ತಾಲೂಕಿನ ಆಲಗೂಡ ಗ್ರಾಮದ ಆದಿನಾಥ ಮಂದಿರದಲ್ಲಿ ನಡೆದ ನಾಥಷಷ್ಠಿ ಮಹೋತ್ಸವದ ದಿಂಡಿ ಮೆರವಣಿಗೆಯಲ್ಲಿ ಫುಗಡಿ ಆಟ ಆಡುವ ವೇಳೆ ಶಾಸಕ ಶರಣು ಸಲಗರ ಹಾಗೂ ವಿಜಯ ಸಿಂಗ್ ಕುಸಿದು ಬಿದ್ದಿದ್ದಾರೆ.

ಮೆರವಣಿಗೆ ಬಳಿಕ ಮೊಸರಿನ ಗಡಿಗೆ ಒಡೆಯುವ ಸ್ಥಳದಲ್ಲಿಯೇ ವಿವಿಧ ಸಾಂಪ್ರದಾಯಿಕ ಚುಟುವಟಿಕೆ‌ ನಡೆಯುತಿತ್ತು, ಈ ವೇಳೆ ಇಬ್ಬರು ನಾಯಕರಿಗೆ ಫುಗಡಿ ಆಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಔಸಾದ ಗಹೀನಿನಾಥ್ ಮಹಾರಾಜರ ಮನವೊಲಿಕೆ ಬಳಿಕ ಇಬ್ಬರು ನಾಯಕರು ಕೈ-ಕೈ ಮಿಲಾಯಿಸಿ ಫುಗಡಿ ಆಡಲು ಮುಂದಾಗಿದ್ದಾರೆ.‌ ಫುಗಡಿ ಆಟದಲ್ಲಿ ವಿಜಯ್ ಸಿಂಗ್ ಎದುರು ಶಾಸಕ ಶರಣು ಸಲಗರ ಕುಸಿದು ಬಿದ್ದಿದ್ದಾರೆ ಬಳಿಕ ಆಯಾ ತಪ್ಪಿ ವಿಜಯ ಸಿಂಗ್ ಕೂಡ ನೆಲಕ್ಕೆ ಬಿದ್ದರು, ಬಳಿಕ ಆಟದಲ್ಲಿ ಕುಸಿದು ಬಿದ್ದ ಇಬ್ಬರು ನಾಯಕರನ್ನ ಜನರು ಮೇಲೆತ್ತಿದ್ದಾರೆ.

Home add -Advt

ಬಸವಕಲ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಸಲಗರ ಎದುರಾಳಿಯಾಗಿದ್ದ ವಿಜಯ ಸಿಂಗ್ ಅವರನ್ನು ಶರಣು ಸಲಗಾರ ಸೋಲಿಸಿದರು. ಫುಗಡಿ ಆಟದಲ್ಲಿ ಸಲಗರಗೆ ಕುಸಿದು ಬೀಳುವಂತೆ ವಿಜಯ ಸಿಂಗ್ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button